×
Ad

ಪಾಕ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ವಿಶ್ವದಾಖಲೆ

Update: 2025-09-22 07:58 IST

PC: x.com/CricketNDTV

ಟಿ20 ಏಷ್ಯಾಕಪ್ ಸೂಪರ್4 ಹಂತದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 6 ವಿಕಟ್ಗಳಿಂದ ಬಗ್ಗುಬಡಿದಿದ್ದು, ಆರಂಭಿಕ ಬ್ಯಾಟ್ಸ್ಮನ್ ಈ ಪಂದ್ಯದಲ್ಲಿ ವಿಶಿಷ್ಟ ವಿಶ್ವದಾಖಲೆ ಸ್ಥಾಪಿಸಿದರು. ಕೇವಲ 39 ಎಸೆತಗಳಲ್ಲಿ 74 ರನ್ ಸಿಡಿಸಿದ ಶರ್ಮಾ, ಟಿ20 ಕ್ರಿಕೆಟ್ನಲ್ಲಿ ಅತಿವೇಗವಾಗಿ 50 ಸಿಕ್ಸರ್ ಹೊಡೆದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

ಭಾರತದ ಯುವ ದಾಂಡಿಗ ಕೇವಲ 331 ಎಸೆತಗಳಲ್ಲಿ 50 ಸಿಕ್ಸರ್ ಹೊಡೆದು ವೆಸ್ಟ್ಇಂಡೀಸ್ನ ಇವಿನ್ ಲೂಯಿಸ್ ಅವರ ಹೆಸರಿನಲ್ಲಿದ್ದ 366 ಎಸೆತಗಳಲ್ಲಿ 50 ಸಿಕ್ಸರ್ ಸಿಡಿಸಿದ ದಾಖಲೆ ಪುಡಿಗಟ್ಟಿದರು.

ಆ್ಯಂಡ್ರೂ ರಸೆಲ್ ಮೂರನೇ ಸ್ಥಾನದಲ್ಲಿದ್ದು, ಹಝರುತ್ತುಲ್ಲಾ ಝಝಾಯಿ ಹಾಗೂ ಸೂರ್ಯಕುಮಾರ್ ಯಾದವ್ ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನದಲ್ಲಿದ್ದಾರೆ. 350ಕ್ಕಿಂತ ಕಡಿಮೆ ಎಸೆತದಲ್ಲಿ 50 ಸಿಕ್ಸರ್ ಸಿಡಿಸಿದ ಮೊಟ್ಟಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಗೂ ಅಭಿಷೇಕ್ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News