×
Ad

ಧರ್ಮಶಾಲದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಚಳಿ ಹಿಡಿಸಿದ ಭಾರತ | 117ಕ್ಕೆ ಆಲೌಟ್ ಆದ ಮರ್ಕ್ರಮ್ ಬಳಗ

Update: 2025-12-14 20:52 IST

Photo Credit : AP \PTI 

ಧರ್ಮಶಾಲ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ - ದಕ್ಷಿಣ ಆಫ್ರಿಕಾ ನಡುವಿನ T20 ಸರಣಿಯ ಮೂರನೇ ಪಂದ್ಯದಲ್ಲಿ, ರವಿವಾರ ದಕ್ಷಿಣ ಆಫ್ರಿಕಾವು ಭಾರತಕ್ಕೆ 9 ವಿಕೆಟ್ ಗಳ ನಷ್ಟಕ್ಕೆ 117 ರನ್ ಗಳಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಭಾರತ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತಂಡವು ರನ್ ಗಳಿಸಲು ಪರದಾಟ ನಡೆಸಿತು. ಒಂದು ರನ್ ಗಳಿಸುವಷ್ಟರಲ್ಲಿ ತಂಡವು 2 ವಿಕೆಟ್ ಕಳೆದುಕೊಂಡಿತ್ತು. ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ತಂಡದ ನಾಯಕ ಆಡಮ್ ಮರ್ಕ್ರಮ್ ತಂಡವನ್ನು ರಕ್ಷಣಾತ್ಮಕ ಆಟವಾಡಿ ನೂರರ ಗಡಿ ದಾಟಿಸಿದರು. 46 ಎಸೆತಗಳಲ್ಲಿ 2 ಸಿಕ್ಸರ್ 6 ಬೌಂಡರಿ ಗಳ ಮೂಲಕ 61 ರನ್ ಗಳಿಸಿದ ಅವರು ಅರ್ಷದೀಪ್ ಸಿಂಗ್ ಬೌಲಿಂಗ್ ನಲ್ಲಿ ಜಿತೇಶ್ ಶರ್ಮಾ ಗೆ ಕ್ಯಾಚಿತ್ತು ಪೆವಿಲಿಯನ್ ದಾರಿ ಹಿಡಿದರು.


ಭಾರತ ತಂಡದ ಪರ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಒಂದೊಂದು ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News