×
Ad

Messi ಜೊತೆ ಫೋಟೊ ತೆಗೆಸಿಕೊಳ್ಳಲು ಯುವ ಆಟಗಾರರಿಗೆ ಜಾಗ ಬಿಟ್ಟುಕೊಟ್ಟ Rahul Gandhi ನಡೆಗೆ ವ್ಯಾಪಕ ಮೆಚ್ಚುಗೆ

Update: 2025-12-14 14:32 IST

Photo: PTI

ಹೈದರಾಬಾದ್‌, ಡಿ.14: ಅರ್ಜೆಂಟೀನಾದ ಫುಟ್‌ಬಾಲ್‌ ದಂತಕಥೆ ಲಿಯೊನೆಲ್‌ ಮೆಸ್ಸಿ  ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ  ತೋರಿದ ಸಂವೇದನಾಶೀಲ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

‘GOAT Tour of India’ ಪ್ರವಾಸದ ಅಂಗವಾಗಿ ಶನಿವಾರ ಸಂಜೆ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆಸ್ಸಿ ಭಾಗವಹಿಸಿದ್ದರು. ಹೈದರಾಬಾದ್‌ ಗೆ ಆಗಮಿಸಿದ ಮೆಸ್ಸಿಯನ್ನು ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ವೇಳೆ ಮೆಸ್ಸಿ ಅವರೊಂದಿಗೆ ರೊಡ್ರಿಗೊ ಡಿ ಪೌಲ್‌ ಹಾಗೂ ಲೂಯಿಸ್‌ ಸೂರೆಜ್‌ ಕೆಲಹೊತ್ತು ಫುಟ್‌ಬಾಲ್‌ ಆಡಿದರು. ಇದರಿಂದ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ರೋಮಾಂಚನಗೊಂಡರು.

ಕಾರ್ಯಕ್ರಮದ ಕೊನೆಯಲ್ಲಿ ಮೆಸ್ಸಿ ಅವರು ಫುಟ್‌ಬಾಲ್‌ ತಂಡಕ್ಕೆ ಟ್ರೋಫಿ ಪ್ರದಾನ ಮಾಡಿದರು. ಈ ವೇಳೆ ತಂಡದ ಯುವ ಆಟಗಾರರು ಮೆಸ್ಸಿಯೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಂದಾದಾಗ, ಮೆಸ್ಸಿಯ ಪಕ್ಕದಲ್ಲಿ ನಿಂತಿದ್ದ ರಾಹುಲ್‌ ಗಾಂಧಿ ಹಿಂದೆ ಸರಿದು ಆಟಗಾರರಿಗೆ ಜಾಗ ಮಾಡಿಕೊಟ್ಟರು. ರಾಹುಲ್‌ ಗಾಂಧಿಯವರ ಮೇಲ್ಪಂಕ್ತಿ ಹಾಕಿಕೊಟ್ಟ ಈ ಕ್ಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದ್ದು, ರಾಹುಲ್‌ ಅವರ ನಡೆಗೆ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭ ಮೆಸ್ಸಿ ಅವರು ತಮ್ಮ ಸಹಿಯನ್ನು ಹೊಂದಿರುವ ಅರ್ಜೆಂಟೀನಾ ತಂಡದ ಜೆರ್ಸಿಯನ್ನು ರಾಹುಲ್‌ ಗಾಂಧಿ ಹಾಗೂ ಮುಖ್ಯಮಂತ್ರಿ ರೇವಂತ್‌ ರೆಡ್ಡಿಗೆ ಉಡುಗೊರೆಯಾಗಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News