×
Ad

GOAT TOUR | ತೆಲಂಗಾಣ ಸಿಎಂ ಜೊತೆ ಫುಟ್ಬಾಲ್ ಆಡಿದ ಮೆಸ್ಸಿ: ವೀಡಿಯೊ ವೈರಲ್

Update: 2025-12-14 08:18 IST

ಹೈದರಾಬಾದ್: ಮೂರು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿರುವ ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ, ಕೊಲ್ಕತ್ತಾದಲ್ಲಿ ನಡೆದ ಅಹಿತಕರ ಘಟನೆಯ ಬೆನ್ನಲ್ಲೇ ಹೈದರಾಬಾದ್ ನಲ್ಲಿ GOAT CUP ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಂಡಿದ್ದು, ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದರು.

ಶನಿವಾರ ಸಂಜೆ ನಗರಕ್ಕೆ ಆಗಮಿಸಿದ ಮೆಸ್ಸಿ, 7:55ರ ಸುಮಾರಿಗೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂಗೆ ಬಂದರು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಜೊತೆ ಫುಟ್ಬಾಲ್ ಆಡಿದ ಅರ್ಜೆಂಟೀನಾ ಐಕಾನ್, ನಿರಾಯಾಸ ಗೋಲು ಕೂಡಾ ಗಳಿಸಿದರು. ಈ ಆಟದ ವೀಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದಕ್ಕೂ ಮೊದಲು ಕೊಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಜಮಾಯಿಸಿದ್ದರು. ರಾಜಕಾರಣಿಗಳು, ವಿವಿಐಪಿಗಳು, ಭದ್ರತಾ ಸಿಬ್ಬಂದಿ ಸೇರಿದ್ದ ಜನಸಮೂಹ ನಿಯಂತ್ರಿಸುವ ಪ್ರಯತ್ನ ಮಾಡುವ ಬದಲು ಸೆಲ್ಫಿಗೆ ಮುಗಿ ಬಿದ್ದದ್ದು ಅವ್ಯವಸ್ಥೆಗೆ ಕಾರಣವಾಗಿತ್ತು.

ಆದರೆ ಹೈದ್ರಾಬಾದ್ ಚಿತ್ರಣ ಸಂಪೂರ್ಣ ಭಿನ್ನವಾಗಿತ್ತು. ಬಿಗಿ ಭದ್ರತೆ ನಡುವೆ ಮೆಸ್ಸಿ ಆಗಮಿಸುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಮೆಸ್ಸಿ ಜತೆ ಭಾರತಕ್ಕೆ ಆಗಮಿಸಿದ್ದ ಲೂಯಿಸ್ ಸೌರಝ್ ಮತ್ತು ರೋಡ್ರಿಗೊ ಡೆ ಪಾಲ್ ಆಟಗಾರರ ಜತೆ ಸೇರಿದರು.

ತೆಲಂಗಾಣ ಸಿಎಂ ರೆಡ್ಡಿಯವರನ್ನು ಭೇಟಿ ಮಾಡಿದ ಮೆಸ್ಸಿ ಪ್ರದರ್ಶನ ಪಂದ್ಯದಲ್ಲಿ ರೆಡ್ಡಿ ಜತೆ ಕೆಲ ಪಾಸ್ ಗಳನ್ನು ಆಡಿ ಚೆಂಡನ್ನು ನೆಟ್ ಸೇರಿಸಿ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News