Ind Vs SA T20 ಸರಣಿ | ಧರ್ಮಶಾಲಾದಲ್ಲಿ 'ಬೆದರಿದ' ಹರಿಣಗಳು; ಭಾರತಕ್ಕೆ ಭರ್ಜರಿ ಜಯ
Update: 2025-12-14 22:18 IST
Photo Credit ; @BCCI
ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಭಾರತ - ದಕ್ಷಿಣ ಆಫ್ರಿಕಾ ನಡುವಿನ T20 ಸರಣಿಯ ಮೂರನೇ ಪಂದ್ಯದಲ್ಲಿ, ರವಿವಾರ ಭಾರತವು ಭರ್ಜರಿ ಜಯಗಳಿಸಿದೆ.
ದಕ್ಷಿಣ ಆಫ್ರಿಕಾ ನೀಡಿದ 118 ರನ್ ಗಳ ಬೆನ್ನತ್ತಿದ ಭಾರತ ತಂಡವು ಕೇವಲ 15.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿ 120 ರನ್ ಗಳಿಸಿ ಸರಣಿಯಲ್ಲಿ ಮುನ್ನಡೆ ಪಡೆದಿದೆ.
ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮ ಸ್ಫೋಟಕ ಆಟ ಪ್ರದರ್ಶಿಸಿ 18 ಎಸೆತಗಳಲ್ಲಿ 36 ರನ್ ಗಳಿಸಿದರು. ಸರಣಿಯಲ್ಲಿ ಮಂಕಾಗಿದ್ದ, ಆಯ್ಕೆದಾರರ ಚದುರಂಗದಾಟವಾಗಿದ್ದ ಶುಭಮನ್ ಗಿಲ್ 28 ಎಸೆತಗಳಲ್ಲಿ 28 ರನ್ ಗಳಿಸಿ T20 ಕ್ರಿಕೆಟ್ ಅಂಗಳದಲ್ಲಿ ತಾಳಿದವನು ಬಾಳಿಯಾನು ಎಂಬುದನ್ನು ತೋರಿಸಿ ಕೊಟ್ಟರು. ಸೂರ್ಯ ಕುಮಾರ್ ಯಾದವ್ ಫಿನಿಶಿಂಗ್ ಮಾಡಲು ಹೋಗಿ ಲುಂಗಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು. ತಿಲಕ್ ವರ್ಮ 26, ಶಿವನ್ ದುಬೆ 10 ರನ್ ಗಳಿಸಿದರು.