×
Ad

ಸರಕು ಕಂಟೈನರನ್ನು ಒಳಗೆ ಎಳೆದುಕೊಂಡ Air India ವಿಮಾನದ ಎಂಜಿನ್!

Update: 2026-01-15 22:37 IST

Photo Credit : PTI 

ಹೊಸದಿಲ್ಲಿ, ಜ. 15: ಏರ್ ಇಂಡಿಯಾ ವಿಮಾನವೊಂದರ ಎಂಜಿನ್ ಸರಕು ಕಂಟೈನರನ್ನು ಒಳಗೆ ಎಳೆದುಕೊಂಡ ಪರಿಣಾಮ ಅದರ ಒಂದು ಎಂಜಿನ್‌ಗೆ ಹಾನಿಯಾದ ಘಟನೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಏರ್‌ಬಸ್ ಎ350 ದಟ್ಟ ಮಂಜಿನಿಂದ ಆವರಿಸಿದ್ದ ವಿಮಾನ ನಿಲ್ದಾಣದಲ್ಲಿ ನಿಧಾನವಾಗಿ ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಇರಾನ್ ತನ್ನ ವಾಯು ಪ್ರದೇಶವನ್ನು ಮುಚ್ಚಿದ ಬಳಿಕ ದಿಲ್ಲಿ ಮತ್ತು ನ್ಯೂಯಾರ್ಕ್ ನಡುವೆ ಸಂಚಾರ ಆರಂಭಿಸಿದ್ದ ಎಐ101 ವಿಮಾನವು ಸ್ವಲ್ಪ ಸಮಯದಲ್ಲೇ ವಿಮಾನ ನಿಲ್ದಾಣಕ್ಕೆ ಹಿಂದಿರುಗಿತ್ತು. ನಂತರ ನಡೆದ ಘಟನೆಯಲ್ಲಿ ವಿಮಾನದ ಎಂಜಿನ್‌ಗೆ ಹಾನಿಯಾಗಿದೆ.

‘‘ದಿಲ್ಲಿ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ್ದ ದಿಲ್ಲಿ–ನ್ಯೂಯಾರ್ಕ್ ವಿಮಾನವು ಇರಾನಿನ ವಾಯು ಪ್ರದೇಶ ಮುಚ್ಚಿದ ಹಿನ್ನೆಲೆಯಲ್ಲಿ ಸ್ವಲ್ಪ ಸಮಯದಲ್ಲೇ ಹಿಂದಿರುಗಿತು. ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ದಟ್ಟ ಮಂಜಿನಲ್ಲಿ ನಿಧಾನವಾಗಿ ಸಂಚರಿಸುತ್ತಿದ್ದಾಗ ವಿಮಾನಕ್ಕೆ ಬಾಹ್ಯ ವಸ್ತು ಸಿಲುಕಿತು. ಇದರಿಂದ ವಿಮಾನದ ಬಲ ಎಂಜಿನ್‌ ಗೆ ಹಾನಿಯಾಯಿತು’’ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಈ ಘಟನೆ ಕುರಿತು ನಾಗರಿಕ ವಾಯು ಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆ ಆರಂಭಿಸಿದ್ದು, ಎಂಜಿನ್‌ಗೆ ಬಾಹ್ಯ ವಸ್ತು ಹೇಗೆ ಸಿಲುಕಿತು ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News