ಜೀವನೋಪಾಯಕ್ಕಾಗಿ 3 ವರ್ಷ ಕ್ರಿಕೆಟ್ ತೊರೆದಿದ್ದ ಆಕಾಶ್ ದೀಪ್!
ಆಕಾಶ್ ದೀಪ್ | Photo: NDTV
ರಾಂಚಿ : ಆಕಾಶ್ ದೀಪ್ ತನ್ನ ಚೊಚ್ಚಲ ಪಂದ್ಯವಾಡುವ ಮೊದಲು, ಅವರಿಗೆ ಭಾರತ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್ ಕ್ಯಾಪ್ ನೀಡಿದರು. ಈ ಸಂದರ್ಭದಲ್ಲಿ ಆಕಾಶ್ ದೀಪ್ರ ತಾಯಿ ಹಾಜರಿದ್ದರು.
ಇದಕ್ಕೂ ಮೊದಲು ಆಕಾಶ ದೀಪ್ ಭಾರತ ಎ ತಂಡದಲ್ಲಿ ಆಡಿದ್ದರು. ಅವರ ನಿರ್ವಹಣೆಯ ಆಧಾರದಲ್ಲಿ ಅವರನ್ನು ಈಗ ರಾಷ್ಟ್ರೀಯ ತಂಡದ ಸೇವೆಗಾಗಿ ಕರೆಯಲಾಗಿದೆ.
ಆದರೆ, ಆಕಾಶ್ ದೀಪ್ರ ಪಾಲಿಗೆ ಎಲ್ಲವೂ ಸರಿಯಾಗಿರಲಿಲ್ಲ. ಜೀವನೋಪಾಯವನ್ನು ಸಂಪಾದಿಸುವುದಕ್ಕಾಗಿ ಕೆಲವು ವರ್ಷಗಳ ಹಿಂದೆ ಅವರು ಕ್ರಿಕೆಟ್ನಿಂದ ಹಿಂದೆ ಸರಿಯಬೇಕಾಗಿತ್ತು.
ಬಿಹಾರದ ಸಸರಾಮ್ ಪಟ್ಟಣದವರಾಗಿರುವ ಆಕಾಶ್ ದೀಪ್ ಕ್ರಿಕೆಟ್ನ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡಿದ್ದರು. ಆದರೆ, ಅವರ ತಂದೆ ಪ್ರೋತ್ಸಾಹ ನೀಡಲಿಲ್ಲ. ಆಕಾಶ್ ದೀಪ್ ಕೆಲಸ ಹುಡುಕುವುದಕ್ಕಾಗಿ ದುರ್ಗಾಪುರಕ್ಕೆ ಹೋದರು. ಅಲ್ಲಿ ಅವರ ಒಬ್ಬ ಮಾವ ಬೆಂಬಲ ನೀಡಿದರು.
ಅವರು ಅಲ್ಲಿ ಒಂದು ಅಕಾಡೆಮಿಯನ್ನು ಸೇರಿದರು. ಅವರ ವೇಗಕ್ಕೆ ಅಲ್ಲಿನವರು ದಂಗಾದರು. ಆದರೆ, ಪ್ರತಿಭಾವಂತ ಕ್ರಿಕೆಟಿಗನಾಗಿ ರೂಪುಗೊಳ್ಳುವ ಮುನ್ನವೇ ಅವರ ತಂದೆ ನಿಧನರಾದರು. ತಂದೆಯ ಸಾವಿನ ಎರಡು ತಿಂಗಳುಗಳ ಬಳಿಕ, ಅವರ ಅಣ್ಣನೂ ಸಾವಿಗೀಡಾದರು.
ಈ ದುರಂತಗಳು ಆಕಾಶ ಕುಟುಂಬದಲ್ಲಿ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸಿತು. ತನ್ನ ತಾಯಿಯನ್ನು ನೋಡಿಕೊಳ್ಳುವುದಕ್ಕಾಗಿ ಆಕಾಶ್ ಮೂರು ವರ್ಷಗಳ ಕಾಲ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದರು. ಕುಟುಂಬವನ್ನು ಸಾಕುವುದಕ್ಕಾಗಿ ಸಂಪಾದನೆಗೆ ತೊಡಗಬೇಕಾಯಿತು. ಆದರೆ, ಕ್ರಿಕೆಟ್ನಿಂದ ಅವರು ಹೆಚ್ಚು ಸಮಯ ದೂರ ಇರಲು ಸಾಧ್ಯವಾಗಲಿಲ್ಲ.
ಅವರು ದುರ್ಗಾಪುರಕ್ಕೆ ಮರಳಿದರು. ಬಳಿಕ ಕೋಲ್ಕತಕ್ಕೆ ತೆರಳಿದರು. ಅಲ್ಲಿ ಬಂಗಾಳಿ ಅಂಡರ್-23 ತಂಡಕ್ಕೆ ಸೇರ್ಪಡೆಯಾದರು ಮತ್ತು 2019ರಲ್ಲಿ ಚೊಚ್ಚಲ ಪಂದ್ಯವಾಡಿದರು. ಬಳಿಕ, ಐಪಿಎಲ್ನಲ್ಲಿ 2022ರ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದರು. 2024 ಫೆಬ್ರವರಿ 23ರಂದು, ಆಕಾಶ್ ದೀಪ್ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರವಾಗಿ ಆಡಿದ 313ನೇ ಆಟಗಾರನಾದರು.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ವೇಗಿ ಆಕಾಶ್ ದೀಪ್ಗೆ ಚೊಚ್ಚಲ ಪಂದ್ಯ. ಚೊಚ್ಚಲ ಪಂದ್ಯದ ಆರಂಭಿಕ ಬೌಲಿಂಗ್ ಅವಧಿಯಲ್ಲೇ ಅವರು ಇಂಗ್ಲೆಂಡ್ ಬ್ಯಾಟರ್ ಗಳ ಮೇಲೆ ಸವಾರಿ ಮಾಡಿದರು.
ಶುಕ್ರವಾರ ಮೊದಲ ದಿನದ ಆಟದ ವೇಳೆ ಅವರು ಮೂರು ವಿಕೆಟ್ಗಳನ್ನು ಉರುಳಿಸಿದರು. ಆಕಾಶ್ ದೀಪ್ರ ಎಸೆತವೊಂದು ಇಂಗ್ಲೆಂಡ್ ಬ್ಯಾಟರ್ ಝ್ಯಾಕ್ ಕ್ರಾಲಿಯ ವಿಕೆಟ್ಗೆ ಯಾವ ವೇಗದಲ್ಲಿ ಬಡಿಯಿತೆಂದರೆ, ವಿಕೆಟ್ ಗಾಳಿಯಲ್ಲಿ ಸುತ್ತುತ್ತಾ ದೂರ ಹೋಗಿ ಬಿತ್ತು. ಏನಾಯಿತೆಂದು ಬ್ಯಾಟರ್ ಗೆ ಅರಿವಾಗುವ ಮೊದಲು ವಿಕೆಟ್ ಹಾರಿ ಹೋಗಿತ್ತು. ಆದರೆ, ದುರದೃಷ್ಟವಶಾತ್ ಆ ಎಸೆತ ನೋಬಾಲ್ ಆಗಿತ್ತು. ಬೌಲರ್ ಗಡಿಗಿಂತ ಕಾಲನ್ನು ಮುಂದಕ್ಕೆ ತಂದಿದ್ದರು. ಹಾಗಾಗಿ ಬ್ಯಾಟರ್ ಔಟಾಗಲಿಲ್ಲ.
ಆದರೆ, ಅದು ಆಕಾಶ್ ದೀಪ್ರಿಗೆ ಆರಂಭ ಮಾತ್ರ ಆಗಿತ್ತು. ಬಳಿಕ ಅವರು ಅದೇ ಓವರ್ ನಲ್ಲಿ ಬೆನ್ ಡಕೆಟ್ ಮತ್ತು ಓಲೀ ಪೋಪ್ರ ವಿಕೆಟ್ಗಳನ್ನು ಉರುಳಿಸಿದರು. ಕೆಲವು ಓವರ್ ಗಳ ಬಳಿಕ, ಹಿಂದಿನ ತಪ್ಪನ್ನು ಸರಿಪಡಿಸಿಕೊಂಡ ದೀಪ್ ಅದೇ ರೀತಿಯಲ್ಲಿ ಕ್ರಾಲಿಯನ್ನು ಔಟ್ ಮಾಡಿದರು. ಈ ಬಾರಿ ಅವರು ಎಸೆದ ಚೆಂಡು ವಿಕೆಟ್ನ ತುದಿಗೆ ಬಡಿದು ಬೇಲ್ಗಳನ್ನು ಹಾರಿಸಿತು.
ವೇಗಿ ಜಸ್ಪ್ರೀತ್ ಬುಮ್ರಾಗೆ ಕೆಲಸದ ಒತ್ತಡ ಅತಿಯಾಗುತ್ತಿದೆ ಎಂಬ ಕಾರಣಕ್ಕಾಗಿ ಅವರಿಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ, ಅವರ ಸ್ಥಾನದಲ್ಲಿ ತಂಡಾಡಳಿತವು ಆಕಾಶ್ ದೀಪ್ರನ್ನು ಕಣಕ್ಕಿಳಿಸಿದೆ.
बिहार के लाल आकाश दीप सिंह ❤✨#AkashDeep pic.twitter.com/dximGBNHeV
— Chandraket Singh Rana (@RanaChandraket) February 23, 2024