ಇಟಾಲಿಯನ್ ಓಪನ್ | ಸಿನ್ನರ್ ಗೆ ನೇರ ಸೆಟ್ಗಳಿಂದ ಸೋಲಿಸಿ ಸಿಂಗಲ್ಸ್ ಪ್ರಶಸ್ತಿ ಗೆದ್ದ ಅಲ್ಕರಾಝ್
ಕಾರ್ಲೊಸ್ ಅಲ್ಕರಾಝ್ | PC : X \ @carlosalcaraz
ರೋಮ್: ಜನ್ನಿಕ್ ಸಿನ್ನರ್ ರನ್ನು 7-6(7/5), 6-1 ಸೆಟ್ಗಳ ಅಂತರದಿಂದ ಮಣಿಸಿರುವ ಕಾರ್ಲೊಸ್ ಅಲ್ಕರಾಝ್ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಮುಂದಿನ ವಾರಾಂತ್ಯದಲ್ಲಿ ಆರಂಭವಾಗಲಿರುವ ಫ್ರೆಂಚ್ ಓಪನ್ ಗಿಂತ ಮೊದಲು ಈ ವರ್ಷ ತನ್ನ 3ನೇ ಪ್ರಶಸ್ತಿಯನ್ನು ಗೆದ್ದಿರುವ ಅಲ್ಕರಾಝ್ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ರ‍್ಯಾಂಕಿಂಗ್ ನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.
ಈ ವರ್ಷ ಆಡಿರುವ ತನ್ನ 4ನೇ ಫೈನಲ್ ಪಂದ್ಯದಲ್ಲಿ ಜಯಶಾಲಿಯಾಗಿರುವ ಸ್ಪೇನ್ ಆಟಗಾರ ಅಲ್ಕರಾಝ್ ಫ್ರೆಂಚ್ ಓಪನ್ನಲ್ಲಿ ಉಳಿದ ಆಟಗಾರರಿಗೆ ಸಂದೇಶ ರವಾನಿಸಿದ್ದಾರೆ. ಅಲ್ಕರಾಝ್ ಫ್ರೆಂಚ್ ಓಪನ್ನ ಹಾಲಿ ಚಾಂಪಿಯನ್ ಆಗಿದ್ದಾರೆ.
ಅಲ್ಕರಾಝ್ ವಿಶ್ವ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದರೂ ಸತತ 26 ಗೆಲುವಿನ ಓಟಕ್ಕೆ ಅಲ್ಕರಾಝ್ ಬ್ರೇಕ್ ಹಾಕಿದರು. ಕಳೆದ ವರ್ಷ ಚೀನಾ ಓಪನ್ ಫೈನಲ್ ನಲ್ಲಿ ಅಲ್ಕರಾಝ್ ವಿರುದ್ಧ ಸೋತ ನಂತರ ಸಿನ್ನರ್ ಗೆಲುವಿನ ಓಟದಲ್ಲಿ ತೊಡಗಿದ್ದರು.
2024ರ ನಂತರ ಫೈನಲ್ ನಲ್ಲಿ ಸಿನ್ನರ್ ಗೆ ಸೋಲುಣಿಸಿದ ಏಕೈಕ ಆಟಗಾರ ಅಲ್ಕರಾಝ್. ಇಟಲಿ ಆಟಗಾರ ಸಿನ್ನರ್ ಪುರುಷರ ಟೆನಿಸ್ನಲ್ಲಿ ಅಗ್ರಮಾನ್ಯ ಆಟಗಾರನಾಗಿ ಬೆಳೆದಿದ್ದಲ್ಲದೆ, 3 ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು.
ಕಳೆದ ತಿಂಗಳು ಮಾಂಟೆ ಕಾರ್ಲೊದಲ್ಲಿ ಪ್ರಶಸ್ತಿ ಜಯಿಸಿದ್ದ ಅಲ್ಕರಾಝ್ ರೋಮ್ ನಲ್ಲಿ ಎರಡನೇ ಬಾರಿ ಮಾಸ್ಟರ್ಸ್-1000 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಬಾರ್ಸಿಲೋನದಲ್ಲೂ ಫೈನಲ್ ಗೆ ತಲುಪಿದ್ದರು.
ಕಳೆದ ವರ್ಷ ಮಾರ್ಚ್ ನಲ್ಲಿ 2 ಬಾರಿ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ 3 ತಿಂಗಳ ಕಾಲ ನಿಷೇಧಕ್ಕೆ ಒಳಗಾಗಿದ್ದ ಸಿನ್ನರ್ ಈ ಟೂರ್ನಮೆಂಟ್ ನಲ್ಲಿ 2ನೇ ಸ್ಥಾನ ಪಡೆದಿರುವುದು ಸಕಾರಾತ್ಮಕ ಫಲಿತಾಂಶವಾಗಿದೆ.