×
Ad

ಅಮನ್ ಸೆಹ್ರಾವತ್, ನೇಹಾ ಸಾಂಗ್ವಾನ್ ಮೇಲಿನ ಅಮಾನತು ಹಿಂಪಡೆದ ಡಬ್ಲ್ಯುಎಫ್‌ಐ

Update: 2025-11-14 21:30 IST

ಅಮನ್ ಸೆಹ್ರಾವತ್ | Photo Credit : PTI 

ಹೊಸದಿಲ್ಲಿ, ನ.14: ತಮ್ಮ ತೂಕ ಮಿತಿಯನ್ನು ಮೀರಿದ್ದಕ್ಕಾಗಿ ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕ ವಿಜೇತ ಅಮನ್ ಸೆಹ್ರಾವತ್ ಹಾಗೂ ಭರವಸೆಯ ಕುಸ್ತಿಪಟು ನೇಹಾ ಸಾಂಗ್ವಾನ್ ಮೇಲೆ ಹೇರಲಾಗಿದ್ದ ಅಮಾನತನ್ನು ಭಾರತದ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ)ಶುಕ್ರವಾರ ಹಿಂಪಡೆದಿದೆ.

ಅಮಾನತಿನಿಂದಾಗಿ ಈ ಇಬ್ಬರು ಕ್ರಮವಾಗಿ ವಿಶ್ವ ಚಾಂಪಿಯನ್‌ ಶಿಪ್ ಹಾಗೂ ವಿಶ್ವದ ಅಂಡರ್-20 ಚಾಂಪಿಯನ್‌ ಶಿಪ್‌ ನಿಂದ ಅನರ್ಹರಾಗಿದ್ದರು.

ಇಬ್ಬರು ಕುಸ್ತಿಪಟುಗಳಿಂದ ಕ್ಷಮಾಪಣಾ ಪತ್ರಗಳನ್ನು ಸ್ವೀಕರಿಸಿದ ನಂತರ, ದೇಶದ ಅಗ್ರ ಕೋಚ್‌ ಗಳನ್ನು ಸಂಪರ್ಕಿಸಿದ ಬಳಿಕ ಡಬ್ಲ್ಯುಎಫ್‌ಐ ಈ ನಿರ್ಧಾರ ಕೈಗೊಂಡಿದೆ. ಇದೀಗ ಇಬ್ಬರು ಕುಸ್ತಿಪಟುಗಳು ಮುಂದಿನ ವರ್ಷದ ಏಶ್ಯನ್ ಗೇಮ್ಸ್ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಆಡಲು ಅರ್ಹತೆ ಪಡೆದಿದ್ದಾರೆ.

ನೇಹಾ(59ಕೆಜಿ)ಆಗಸ್ಟ್‌ನಲ್ಲಿ ಬಲ್ಗೇರಿಯಾದಲ್ಲಿ ನಡೆದ ವಿಶ್ವದ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಹೆಚ್ಚು ತೂಕ ಹೊಂದಿದ್ದರು. ಅಮನ್ ಸೆಪ್ಟಂಬರ್‌ ನಲ್ಲಿ ಕ್ರೊಯೇಶಿಯದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ ಶಿಪ್‌ ನಲ್ಲಿ ತೂಕ ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದರು.

ನೇಹಾ ಹಾಗೂ ಅಮನ್ ಕ್ರಮವಾಗಿ ಎರಡು ಹಾಗೂ ಒಂದು ವರ್ಷ ಕಾಲ ಅಮಾನತುಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News