×
Ad

ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಅಮಿತ್ ಮಿಶ್ರಾ

Update: 2025-09-04 13:54 IST

ಅಮಿತ್ ಮಿಶ್ರಾ (Photo credit: AP)

ಹೊಸದಿಲ್ಲಿ: ಗುರುವಾರ ಭಾರತೀಯ ಕ್ರಿಕೆಟ್ ತಂಡದ ಹಿರಿಯ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಆ ಮೂಲಕ, ತಮ್ಮ 15 ವರ್ಷಕ್ಕೂ ಹೆಚ್ಚು ಕಾಲದ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.

ಭಾರತ ತಂಡದ ಪರವಾಗಿ ಕೊನೆಯದಾಗಿ 2017ರಲ್ಲಿ ಆಟವಾಡಿದ್ದ 42 ವರ್ಷದ ಹರ್ಯಾಣ ಕ್ರಿಕೆಟಿಗ ಅಮಿತ್ ಮಿಶ್ರಾ, ನಂತರ 2024ರ ಐಪಿಎಲ್ ಆವೃತ್ತಿವರೆಗೂ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿದ್ದರು.

ತಮ್ಮ ನಿವೃತ್ತಿಯನ್ನು ದೃಢಪಡಿಸಿರುವ ಅಮಿತ್ ಮಿಶ್ರಾ, “ನಾನು ನಿವೃತ್ತಿಯಾಗಲು ನಿರ್ಧರಿಸಿದ್ದೇನೆ” ಎಂದು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅಮಿತ್ ಮಿಶ್ರಾ ಭಾರತ ತಂಡವನ್ನು 22 ಟೆಸ್ಟ್, 36 ಏಕ ದಿನ ಪಂದ್ಯಗಳು ಹಾಗೂ 10 ಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ಕಲಾತ್ಮಕ ಲೆಗ್ ಸ್ಪಿನ್ನರ್ ಆಗಿದ್ದ ಅಮಿತ್ ಮಿಶ್ರಾ, 2008ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಹಾಗೂ ಎರಡನೆ ಇನಿಂಗ್ಸ್ ನಲ್ಲಿ 2 ವಿಕೆಟ್ ಕಿತ್ತಿದ್ದ ಅಮಿತ್ ಮಿಶ್ರಾ, ಯಶಸ್ವಿಯಾಗಿ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News