×
Ad

ವಿಶ್ವಕಪ್ ಫೈನಲ್ ಆರಂಭಕ್ಕೂ ಮುನ್ನ ಆಕರ್ಷಕ ಏರ್ ಶೋ

Update: 2023-11-19 14:01 IST

Photo : x/@mufaddal_vohra

ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ - ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಪುರುಷರ ಏಕದಿನ ವಿಶ್ವಕಪ್‌ನ ಫೈನಲ್‌ ಪಂದ್ಯದ ಆರಂಭಕ್ಕೂ ಮುನ್ನ ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡವು ವೈಮಾನಿಕ ಪ್ರದರ್ಶನ ನೀಡಿತು.

ಟಾಸ್‌ ಬಳಿಕ ಆಗಸದಲ್ಲಿ ಗರ್ಜಿಸಿದ ಲೋಹದ ಹಕ್ಕಿಗಳ ವೈಮಾನಿಕ ಪ್ರದರ್ಶನ ಪ್ರೇಕ್ಷಕರ ಮೈನವೀರಳಿಸಿತು. ಸುಮಾರು 20 ನಿಮಿಷಗಳ ಕಾಲ ನಡೆದ ಈ ಪ್ರದರ್ಶನವನ್ನು ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ನೋಡಿ ಖುಷಿಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News