×
Ad

ಕೊನೆಯ ಟೆಸ್ಟ್‌ನಲ್ಲಿ ಆ್ಯಂಜೆಲೋ ಮ್ಯಾಥ್ಯೂಸ್‌ಗೆ ಬಾಂಗ್ಲಾ ಕ್ರಿಕೆಟಿಗರಿಂದ ಗೌರವ ರಕ್ಷೆ

Update: 2025-06-19 22:37 IST

PC : ICC

ಗಾಲೆ: ಶ್ರೀಲಂಕಾ ಕ್ರಿಕೆಟ್ ತಂಡದ ಆ್ಯಂಜೆಲೋ ಮ್ಯಾಥ್ಯೂಸ್ ಗುರುವಾರ ಗಾಲೆ ಮೈದಾನದಿಂದ ಬಹುಷಃ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ಹೊರ ನಡೆದರು. ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್‌ನ ಮೂರನೇ ದಿನದಂದು ಶ್ರೀಲಂಕಾದ ಮೊದಲ ಇನಿಂಗ್ಸ್‌ನಲ್ಲಿ 39 ರನ್‌ಗಳನ್ನು ಗಳಿಸಿ ಅವರು ನಿರ್ಗಮಿಸಿದಾಗ ಬಾಂಗ್ಲಾದೇಶಿ ಆಟಗಾರರು ಸಾಲಾಗಿ ನಿಂತು ಅವರಿಗೆ ಗೌರವ ರಕ್ಷೆ ನೀಡಿದರು.

ಇದು ಸುಮಾರು ಎರಡು ದಶಕಗಳ ಕಾಲ ಕ್ರಿಕೆಟ್ ಆಡಿದ ಆಟಗಾರನಿಗೆ ಬಾಂಗ್ಲಾದೇಶಿ ಆಟಗಾರರು ಸಲ್ಲಿಸಿದ ಗೌರವವಾಗಿತ್ತು.

ಇದು ಮ್ಯಾಥ್ಯೂಸ್‌ರ 119ನೇ ಟೆಸ್ಟ್ ಆಗಿದೆ. ಇದು ಅವರ ಸುದೀರ್ಘ ಟೆಸ್ಟ್ ಕ್ರಿಕೆಟ್ ಜೀವನದ ಕೊನೆಯ ಪಂದ್ಯವೂ ಆಗಿದೆ. 17 ವರ್ಷಗಳ ಅವಧಿಯಲ್ಲಿ ಅವರು ಶ್ರೀಲಂಕಾ ಕ್ರಿಕೆಟ್‌ನ ಅತ್ಯಂತ ಅವಲಂಬನಾರ್ಹ ಆಟಗಾರರ ಪೈಕಿ ಒಬ್ಬರಾದರು. ಅವರು ಬ್ಯಾಟ್‌ನಲ್ಲಿ ಮತ್ತು ಅಗತ್ಯ ಬಿದ್ದಾಗ ಚೆಂಡಿನಲ್ಲಿಯೂ ಕೊಡುಗೆ ನೀಡಿದ್ದರು.

ಅವರು ಟೆಸ್ಟ್‌ನಲ್ಲಿ 16 ಶತಕಗಳನ್ನು ಒಳಗೊಂಡ 8,206 ರನ್‌ಗಳನ್ನು ಗಳಿಸಿದರು. ಅವರು ಶ್ರೀಲಂಕಾದ ಪ್ರಮುಖ ಆಟಗಾರರ ನಿವೃತ್ತಿಯ ಬಳಿಕದ ಅವಧಿಯಲ್ಲಿ ಆಡಿದರು. ಅವರು ಪಂದ್ಯದ ಬಳಿಕ ಪಂದ್ಯದಲ್ಲಿ ಉತ್ತಮ ನಿರ್ವಹಣೆಯನ್ನು ನೀಡುತ್ತಾ ಬಂದಿದ್ದಾರೆ.

ಇದು ನನ್ನ ಕೊನೆಯ ಟೆಸ್ಟ್ ಎಂಬುದಾಗಿ ಈ ವಾರದ ಆರಂಭದಲ್ಲಿ ಮ್ಯಾಥ್ಯೂಸ್ ಹೇಳಿದ್ದರು. ‘‘ನಾನು ಎಲ್ಲವನ್ನೂ ಕ್ರಿಕೆಟ್‌ಗೆ ಕೊಟ್ಟಿದ್ದೇನೆ ಮತ್ತು ಪ್ರತಿಯಾಗಿ ಕ್ರಿಕೆಟ್ ಎಲ್ಲವನ್ನೂ ನನಗೆ ಕೊಟ್ಟಿದೆ’’ ಎಂಬುದಾಗಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ತಂಡಕ್ಕೆ ನನ್ನ ಅಗತ್ಯ ಬಿದ್ದರೆ, ಸೀಮಿತ ಓವರ್‌ಗಳ (ಏಕದಿನ ಮತ್ತು ಟಿ20) ಪಂದ್ಯಗಳಿಗೆ ಲಭ್ಯನಿದ್ದೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ಅಲ್ಲಿ ಗಡಚಿಕ್ಕುವ ಚಪ್ಪಾಳೆಯಿರಲಿಲ್ಲ, ಆದರೆ, ಆ ಚಪ್ಪಾಳೆ ಪ್ರಾಮಾಣಿಕವೆಂದು ಅನಿಸಿತು. ಅಲ್ಲಿ ವೈಭವದ ಭಾಷಣವಿರಲಿಲ್ಲ, ಧ್ವಜಗಳು ಹಾರುತ್ತಿರಲಿಲ್ಲ, ಶ್ರೀಲಂಕಾ ಕ್ರಿಕೆಟ್‌ಗೆ ತನ್ನ ಶ್ರೇಷ್ಠ ವರ್ಷಗಳನ್ನು ನೀಡಿದ ಆಟಗಾರನೊಬ್ಬನಿಗೆ ಪ್ರೇಕ್ಷಕರ ಮೌನವಾಗಿ ತಲೆ ಅಲ್ಲಾಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News