×
Ad

ಪಾಕ್‌ ಗೆ ಮತ್ತೆ ಹಿನ್ನಡೆ: ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯಕ್ಕೆ ಸ್ಟಾರ್ ಆಲ್‌ರೌಂಡರ್ ಅಲಭ್ಯ?

Update: 2023-11-03 22:39 IST

Photo: cricketworldcup.com

ಹೊಸದಿಲ್ಲಿ: ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಪಾಕಿಸ್ತಾನದ ಆಲ್‌ರೌಂಡರ್ ಶಾದಾಬ್ ಖಾನ್ ಮುಂಬರುವ ನ್ಯೂಝಿಲ್ಯಾಂಡ್ ವಿರುದ್ದ ವಿಶ್ವಕಪ್ ಪಂದ್ಯದಲ್ಲಿ ಆಡುವುದು ಅನುಮಾನ.

ಶಾದಾಬ್ ಖಾನ್ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ ಪಂದ್ಯಕ್ಕೆ ಲಭ್ಯವಿರುವ ಕುರಿತು ಅನಿಶ್ಚಿತತೆ ಇದೆ ಎಂದು ಟೀಮ್ ನಿರ್ದೇಶಕ ಮಿಕಿ ಅರ್ಥರ್ ದೃಢಪಡಿಸಿದ್ದಾರೆ.

ಶಾದಾಬ್ ಖಾನ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದರು. ಕಳೆದ ವರ್ಷದ ಸೆಪ್ಟಂಬರ್ ನಂತರ ಮೂರನೇ ಬಾರಿ ಪಾಕ್ ಸ್ಪಿನ್ನರ್ ಶಾದಾಬ್ ಗಾಯಗೊಂಡಿದ್ದಾರೆ.

ಶಾದಾಬ್ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ಶುಕ್ರವಾರ ಅಭ್ಯಾಸ ನಡೆಸಿದ್ದಾರೆ. ತಂಡಕ್ಕೆ ಶಾದಾಬ್ ವಾಪಸಾಗುವ ಕುರಿತಂತೆ ಪ್ರತಿಕ್ರಿಯಿಸಿದ ಅರ್ಥರ್, ಶಾದಾಬ್ ಇಂದು ಪ್ರಾಥಮಿಕ ಪರೀಕ್ಷೆಗೆ ಒಳಗಾಗಿದ್ದಾರೆ. ವೈದ್ಯಕೀಯ ಶಿಷ್ಟಾಚಾರದ ಪ್ರಕಾರ ನಾವಿದನ್ನು ಮಾಡಿದ್ದೇವೆ. ಪರೀಕ್ಷೆಯಲ್ಲಿ ಅವರು ಪಾಸಾಗಿದ್ದಾರೆ. ಆದರೆ ಅವರ ಕುರಿತು ನಿರ್ಧರಿಸುವ ಸ್ಥಿತಿಯಲ್ಲಿ ನಾವಿಲ್ಲ. ಶಾದಾಬ್ ತಲೆ ಮೈದಾನಕ್ಕೆ ಜಜ್ಜಿರುವ ಘಟನೆಯು ನಿಜಕ್ಕೂ ಗಂಭೀರವಾಗಿದೆ ಎಂದರು.

ಮುಂಬರುವ ನ್ಯೂಝಿಲ್ಯಾಂಡ್ ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಪಂದ್ಯವು ಮಾಡು-ಮಡಿ ಪಂದ್ಯವಾಗಿವೆ ಎಂದು ಅರ್ಥರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News