×
Ad

ವಿಶ್ವಕಪ್ ತಂಡದಲ್ಲಿ ಅಕ್ಷರ್ ಪಟೇಲ್ ಬದಲಿಗೆ ಅಶ್ವಿನ್ ಗೆ ಸ್ಥಾನ

Update: 2023-09-28 23:16 IST

                                                                             ಅಶ್ವಿನ್,ಅಕ್ಷರ್ ಪಟೇಲ್ | Photo : X

ಮುಂಬೈ: ಏಕದಿನ ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ಆಡುವ 15 ಆಟಗಾರರ ಭಾರತೀಯ ತಂಡದಲ್ಲಿ ಗಾಯಾಳು ಅಕ್ಷರ್ ಪಟೇಲ್‍ರ ಸ್ಥಾನವನ್ನು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪಡೆದಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಏಶ್ಯಕಪ್ ಸೂಪರ್ 4 ಪಂದ್ಯವೊಂದರಲ್ಲಿ ಅಕ್ಷರ್ ಗಾಯಗೊಂಡಿದ್ದರು. ಭಾರತೀಯ ವಿಶ್ವಕಪ್ ತಂಡಕ್ಕೆ ಅವರನ್ನು ಸೇರಿಸಲಾಗಿತ್ತಾದರೂ ಸರಿಯಾದ ಸಮಯಕ್ಕೆ ಗಾಯದಿಂದ ಚೇತರಿಸಿಕೊಳ್ಳಲು ಅವರು ವಿಫಲರಾಗಿದ್ದಾರೆ.

ಈಗ ಅವರ ಸ್ಥಾನಕ್ಕೆ ಅಶ್ವಿನ್‍ರನ್ನು ಸೇರ್ಪಡೆಗೊಳಿಸಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡಿರುವ ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಶ್ವಿನ್ ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್‍ಗಳನ್ನು ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News