×
Ad

ಏಶ್ಯ ಕಪ್ | ಭಾರತ ವಿರುದ್ಧದ ಸೂಪರ್-4 ಪಂದ್ಯ ಮುನ್ನಾದಿನದ ಪತ್ರಿಕಾಗೋಷ್ಠಿ ರದ್ದುಪಡಿಸಿದ ಪಾಕಿಸ್ತಾನ

Update: 2025-09-20 22:22 IST

PC : X 

ದುಬೈ, ಸೆ.20: ಏಶ್ಯ ಕಪ್ ಟೂರ್ನಿಯಲ್ಲಿ ಭಾರತ ತಂಡದ ವಿರುದ್ಧ ರವಿವಾರ ನಡೆಯಲಿರುವ ಸೂಪರ್-4 ಪಂದ್ಯ ಮುನ್ನಾದಿನವಾದ ಶನಿವಾರದ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಲು ಪಾಕಿಸ್ತಾನ ತಂಡ ನಿರ್ಧರಿಸಿದೆ.

ಯುಎಇ ತಂಡದ ವಿರುದ್ಧ ಪಂದ್ಯದ ಮುನ್ನಾದಿನವೂ ಪಾಕಿಸ್ತಾನ ತಂಡ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಿತ್ತು.

ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆ ನಿಗದಿಯಾಗಿರುವ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಲಾಗಿದೆ. ತಂಡವು ಯೋಜನೆಯಂತೆ ದುಬೈನಲ್ಲಿರುವ ಐಸಿಸಿ ಅಕಾಡಮಿಯಲ್ಲಿ 3 ಗಂಟೆಗಳ ತರಬೇತಿಯಲ್ಲಿ ಭಾಗವಹಿಸಿದೆ.

ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಿರುವ ಕಾರಣ ಇನ್ನೂ ಗೊತ್ತಾಗಿಲ್ಲ. ಪಾಕಿಸ್ತಾನ ತಂಡವು ಸತತ 2ನೇ ಬಾರಿ ಪಂದ್ಯಪೂರ್ವ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದೆ.

ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಒಳಗೊಂಡಿರುವ ಹ್ಯಾಂಡ್‌ಶೇಕ್ ವಿವಾದಕ್ಕೆ ಸಂಬಂಧಿಸಿ ಯುಎಇ ತಂಡದ ವಿರುದ್ಧ ನಿರ್ಣಾಯಕ ಗ್ರೂಪ್ ಪಂದ್ಯದ ಮುನ್ನಾದಿನ ಪಾಕಿಸ್ತಾನ ತಂಡ ಸುದ್ದಿಗೋಷ್ಠಿಯಲ್ಲಿ ರದ್ದುಪಡಿಸಿತ್ತು.

ಸೆ.14ರಂದು ಭಾರತ-ಪಾಕಿಸ್ತಾನ ಪಂದ್ಯದ ಹ್ಯಾಂಡ್ ಶೇಕ್ ಘಟನೆಯಲ್ಲಿ ಭಾಗಿಯಾಗಿರುವ ಪೈಕ್ರಾಫ್ಟ್ ಅವರರನ್ನು ಮುಂಬರುವ ಸೂಪರ್-4 ಪಂದ್ಯಕ್ಕೂ ಪಂದ್ಯದ ರೆಫರಿಯಾಗಿ ನೇಮಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News