ಏಶ್ಯಕಪ್ ಸೂಪರ್-4 ಪಂದ್ಯ: ಭಾರತದ ಗೆಲುವಿಗೆ 266 ರನ್ ಗುರಿ ನೀಡಿದ ಬಾಂಗ್ಲಾದೇಶ
Update: 2023-09-15 18:58 IST
Photo: twitter \ @ICC
ಕೊಲಂಬೊ, ಸೆ.15: ನಾಯಕ ಶಾಕಿಬ್ ಅಲ್ ಹಸನ್ (80 ರನ್, 85 ಎಸೆತ) ಹಾಗೂ ತೌಹಿದ್ ಹ್ರಿದೋಯ್ (54 ರನ್, 81 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ಬಾಂಗ್ಲಾದೇಶ ತಂಡ ಏಶ್ಯಕಪ್‌ನ ಸೂಪರ್-4 ಪಂದ್ಯದಲ್ಲಿ ಭಾರತದ ಗೆಲುವಿಗೆ 266 ರನ್ ಗುರಿ ನೀಡಿದೆ.
ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿದೆ.
ಭಾರತದ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಶಾರ್ದೂಲ್ ಠಾಕೂರ್(3-65) ಯಶಸ್ವಿ ಪ್ರದರ್ಶನ ನೀಡಿದರು. ಮುಹಮ್ಮದ್ ಶಮಿ(2-32)ಎರಡು ವಿಕೆಟ್ ಪಡೆದರು. ಪ್ರಸಿದ್ಧ ಕೃಷ್ಣ(1-43), ಅಕ್ಷರ್ ಪಟೇಲ್(1-47) ಹಾಗೂ ರವೀಂದ್ರ ಜಡೇಜ(1-53) ತಲಾ ಒಂದು ವಿಕೆಟ್ ಪಡೆದರು.