ಏಶ್ಯಕಪ್ ಸೂಪರ್-4 ಪಂದ್ಯ: ಪಾಕಿಸ್ತಾನದ ಗೆಲುವಿಗೆ 357 ರನ್ ಗುರಿ ನೀಡಿದ ಭಾರತ
ಕೆ.ಎಲ್.ರಾಹುಲ್ , ವಿರಾಟ್ ಕೊಹ್ಲಿ| Photo: twitter \ @BCCI
ಕೊಲಂಬೊ: ವಿರಾಟ್ ಕೊಹ್ಲಿ (ಔಟಾಗದೆ 122 ರನ್, 94 ಎಸೆತ, 9 ಬೌಂಡರಿ, 3 ಸಿಕ್ಸರ್) ಹಾಗೂ ಕೆ.ಎಲ್.ರಾಹುಲ್ (ಔಟಾಗದೆ 111 ರನ್, 106 ಎಸೆತ, 12 ಬೌಂಡರಿ, 2 ಸಿಕ್ಸರ್) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡ ಏಶ್ಯಕಪ್‌ನ ಸೂಪರ್-4 ಪಂದ್ಯದ ಗೆಲುವಿಗೆ ಪಾಕಿಸ್ತಾನಕ್ಕೆ 357 ರನ್ ಗುರಿ ನೀಡಿದೆ.
ಮಳೆಯಿಂದಾಗಿ ರವಿವಾರ ರದ್ದಾಗಿದ್ದ ಪಂದ್ಯವು ಮೀಸಲು ದಿನವಾದ ಸೋಮವಾರ ಮುಂದುವರಿಸಲಾಯಿತು. ಭಾರತವು 2 ವಿಕೆಟ್ ನಷ್ಟಕ್ಕೆ 147 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 233 ರನ್ ಜೊತೆಯಾಟ ನಡೆಸಿದ ಕೊಹ್ಲಿ ಹಾಗೂ ರಾಹುಲ್ ಭಾರತವು ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಕಲೆಹಾಕುವಲ್ಲಿ ನೆರವಾದರು.
ಗಾಯಗೊಂಡಿದ್ದ ಹಾರಿಸ್ ರವೂಫ್ ಅನುಪಸ್ಥಿತಿಯಲ್ಲಿ ಇಂದು ಪಾಕಿಸ್ತಾನದ ಬೌಲಿಂಗ್ ಪ್ರದರ್ಶನ ನೀರಸವಾಗಿತ್ತು. ಕೊಹ್ಲಿ ಹಾಗೂ ರಾಹುಲ್ ಪಾಕ್ ಬೌಲರ್‌ಗಳನ್ನು ಲೀಲಾಜಾಲವಾಗಿ ದಂಡಿಸಿದರು.