×
Ad

ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್‌ ಶಿಪ್ | ರಾಷ್ಟ್ರೀಯ ದಾಖಲೆ ಪುಡಿಗಟ್ಟಿ ಕಂಚು ಗೆದ್ದ ಅನಿಮೇಶ್ ಕುಜುರ್

Update: 2025-05-31 22:23 IST

 ಅನಿಮೇಶ್ ಕುಜುರ್ | PC : X 

ಗುಮಿ(ದಕ್ಷಿಣ ಕೊರಿಯ): ದಕ್ಷಿಣ ಕೊರಿಯಾದ ಗುಮಿಯಲ್ಲಿ ನಡೆಯುತ್ತಿರುವ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್‌ ಶಿಪ್ನ 4ನೇ ದಿನವಾದ ಶನಿವಾರ ಜಾವೆಲಿನ್ ಎಸೆತಗಾರ ಸಚಿನ್ ಯಾದವ್, ಓಟಗಾರ್ತಿ ಪಾರುಲ್ ಚೌಧರಿ ಹಾಗೂ ಮಹಿಳೆಯರ 4-100 ಮೀ.ರಿಲೇಯಲ್ಲಿ ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.

ಓಟಗಾರರಾದ ಅನಿಮೇಶ್ ಕುಜುರ್ ಹಾಗೂ ಪೂಜಾ, ಹರ್ಡಲ್ಸ್ನಲ್ಲಿ ವಿದ್ಯಾ ರಾಮ್ರಾಜ್ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

4ನೇ ದಿನ ಭಾರತವು ತಲಾ 3 ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದೆ. ಒಟ್ಟು 8 ಚಿನ್ನ, 10 ಬೆಳ್ಳಿ ಹಾಗೂ 6 ಕಂಚಿನ ಪದಕದೊಂದಿಗೆ ಪದಕಪಟ್ಟಿಯಲ್ಲಿ ಚೀನಾದ ನಂತರ 2ನೇ ಸ್ಥಾನದಲ್ಲಿದೆ.

ಅನಿಮೇಶ್ ಪುರುಷರ 200 ಮೀ.ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದು 20.32 ಸೆಕೆಂಡ್‌ ನಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದಿದ್ದಾರೆ.

ಈ ವರ್ಷಾರಂಭದಲ್ಲಿ ಫೆಡರೇಶನ್ ಪ್‌ ನಲ್ಲಿ ಅನಿಮೇಶ್ ಅವರು ರಾಷ್ಟ್ರೀಯ ದಾಖಲೆ(20.40ಸೆ.)ನಿರ್ಮಿಸಿದ್ದರು.

ಈ ಪದಕದ ಮೂಲಕ ಅನಿಮೇಶ್ ಅವರು 2015ರಲ್ಲಿ ಧರ್ಮವೀರ್ ಸಿಂಗ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಏಶ್ಯನ್ ಚಾಂಪಿಯನ್‌ ಶಿಪ್ನಲ್ಲಿ 200 ಮೀ. ಓಟದಲ್ಲಿ ಪದಕ ಗೆದ್ದಿರುವ ಭಾರತದ 2ನೇ ಅತ್ಲೀಟ್ ಎನಿಸಿಕೊಂಡಿದ್ದಾರೆ.

ಜಪಾನಿನ ತೋವಾ ಉಝಾವಾ 20.12 ಸೆಕೆಂಡ್‌ ನಲ್ಲಿ ಗುರಿ ತಲುಪಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು. ಸೌದಿ ಅರೇಬಿಯದ ಅಬ್ದುಲ್ಅಝೀಝ್ ವೈಯಕ್ತಿಕ ಶ್ರೇಷ್ಠ ಸಮಯ(20.31 ಸೆ.)ದೊಂದಿಗೆ ಕಂಚಿನ ಪದಕ ಜಯಿಸಿದರು.

► 5,000 ಮೀ. ಓಟ: ಪಾರುಲ್ಗೆ ಬೆಳ್ಳಿ

ಭಾರತೀಯ ಕ್ರೀಡಾಪಟುಗಳಾದ ಪಾರುಲ್ ಚೌಧರಿ ಹಾಗೂ ವಿದ್ಯಾ ರಾಮ್ರಾಜ್ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್‌ ಶಿಪ್ನಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಪಾರುಲ್ 15:15.33 ಸೆಕೆಂಡ್‌ ನಲ್ಲಿ ಗುರಿ ತಲುಪಿ ಮಹಿಳೆಯರ 5,000 ಮೀ.ಓಟದಲ್ಲಿ ಬೆಳ್ಳಿ ಪದಕ ಜಯಿಸಿದರು. ಕಝಕ್ಸ್ತಾನದ ನೊರ್ಹಾ ಜೆರುಟೊ(14:58.71 ಸೆ.)ಚಿನ್ನ ಜಯಿಸಿದರೆ, ಜಪಾನಿನ ಯುಮಾ ಯಮಮೊಟೊ(15:16.86ಸೆ.)ಕಂಚಿನ ಪದಕ ಜಯಿಸಿದರು.

ತಮಿಳುನಾಡಿನ 26ರ ಹರೆಯದ ವಿದ್ಯಾ ಮಹಿಳೆಯರ 400ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ 56.46 ಸೆಕೆಂಡ್‌ ನಲ್ಲಿ ಗುರಿ ತಲುಪಿ 3ನೇ ಸ್ಥಾನ ಪಡೆದಿದ್ದಾರೆ. ಚೀನಾದ ಮೊ ಜಿಯಾಡೀ ಹಾಗೂ ಬಹರೈನ್ನ ಒಲುವಕೆಮಿ ಮೊದಲೆರಡು ಸ್ಥಾನ ಪಡೆದರು.

ಮಹಿಳೆಯರ 800 ಮೀ.ಓಟದಲ್ಲಿ ಪೂಜಾ ವೈಯಕ್ತಿಕ ಶ್ರೇಷ್ಠ ಸಾಧನೆ(2:01.89 ಸೆ.)ಯೊಂದಿಗೆ ಕಂಚಿನ ಪದಕ ಜಯಿಸಿದ್ದರು.

ಮಹಿಳೆಯರ 4-100ಮೀ. ರಿಲೇ ಟೀಮ್ ಈ ವರ್ಷದ ಶ್ರೇಷ್ಠ ಸಮಯ(43.86 ಸೆಕೆಂಡ್)ದೊಂದಿಗೆ ಗುರಿ ತಲುಪಿ ಬೆಳ್ಳಿ ಪದಕ ಜಯಿಸಿತು. ಈ ಮೂಲಕ ಭಾರತವು ಚಾಂಪಿಯನ್‌ ಶಿಪ್ನಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ.

ಚೀನಾ(43.28 ಸೆಕೆಂಡ್)ಹಾಗೂ ಥಾಯ್ಲೆಂಡ್(44.26) ತಂಡಗಳು ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕಗಳನ್ನು ಜಯಿಸಿವೆ.

ಭಾರತದ ರಿಲೇ ತಂಡದಲ್ಲಿ ಸ್ರಬಾನಿ ನಂದಾ, ಅಭಿನಯ ರಾಜರಾಜನ್, ಸ್ನೇಹಾ ಎಸ್.ಎಸ್ ಹಾಗೂ ನಿತ್ಯಾ ಗಾಂಧೆ ಅವರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News