×
Ad

ಸಿಕ್ಕಿಂ ಆಟಗಾರ ರೋಹಿತ್ ಶರ್ಮಾರ ಪಾದ ಮುಟ್ಟಿ ನಮಸ್ಕರಿಸಿದ್ದು ನಿಜವೇ?

Update: 2025-12-26 08:20 IST

PC: screengrab/ x.com/ImRo45_Club

 ಮುಂಬೈ: ಮುಂಬೈ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಸಿಕ್ಕಿಂ ಆಟಗಾರರೊಬ್ಬರು ಭಾರತದ ಸ್ಟಾರ್ ಕ್ರಿಕೆಟರ್ ರೋಹಿತ್ ಶರ್ಮಾ ಅವರ ಪಾದಮುಟ್ಟಿ ನಮಸ್ಕರಿಸಿದ್ದಾರೆ ಎಂದು ಬಿಂಬಿಸುವ ವಿಡಿಯೊ ಬಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಿಕ್ಕಿಂ ಆಟಗಾರ ರೋಹಿತ್ ಅವರ ಪಾದ ಸ್ಪರ್ಶಿಸಲು ಬಾಗಿದಂತೆ ವಿಡಿಯೊದಲ್ಲಿ ಕಂಡುಬರುತ್ತಿತ್ತು. ಆದರೆ ವಾಸ್ತವವಾಗಿ ರೋಹಿತ್ ಶರ್ಮಾ ಅವರ ಕೈ ಕುಲುಕುವ ವೇಳೆ ಬಿದ್ದ ಟೊಪ್ಪಿಯನ್ನು ಹೆಚ್ಚಿಕೊಳ್ಳಲು ಈ ಆಟಗಾರ ಬಾಗಿರುವುದು ವಿಡಿಯೊವನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಕಂಡುಬರುತ್ತಿದೆ.

ಹಿರಿಯ ಕ್ರಿಕೆಟಿಗ ರೋಹಿತ್ ಶರ್ಮಾ ಆಗ ಈ ಆಟಗಾರನ ಬೆನ್ನುತಟ್ಟಿದರು. ಈ ಪಂದ್ಯದಲ್ಲಿ ಕೇವಲ 94 ಎಸೆತಗಳಲ್ಲಿ 155 ರನ್ ಸಿಡಿಸುವ ಮೂಲಕ ರೋಹಿತ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. 9 ಸಿಕ್ಸರ್ ಹಾಗೂ 18 ಬೌಂಡರಿಗಳ ಸಹಿತ 164.89 ಸ್ಟ್ರೈಕ್ ರೇಟ್ ನೊಂದಿಗೆ ಅಚ್ಚರಿ ಮೂಡಿಸಿದ್ದರು.

ಆರಂಭಿಕ ಆಟಗಾರ ಅಂಕ್ರಿಶ್ ರಘುವಂಶಿ ಜತೆಗೆ 141 ರನ್ ಗಳ ಜತೆಯಾಟ ಹಾಗೂ ಮುಶೀರ್ ಖಾನ್ ಜತೆ 85 ರನ್ ಗಳ ಜತೆಯಾಟ ನೀಡುವ ಮೂಲಕ ರೋಹಿತ್, ಮುಂಬೈ ತಂಡದ ಸುಲಭ ಜಯಕ್ಕೆ ಕಾರಣರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News