×
Ad

ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ | ಥಾಯ್ಲೆಂಡ್ ವಿರುದ್ಧ ಭಾರತದ ಮಹಿಳಾ ತಂಡ ಪ್ರಾಬಲ್ಯ

Update: 2024-11-14 21:17 IST

PC : X \ @The 

ರಾಜ್‌ಗಿರ್(ಬಿಹಾರ) : ಯುವ ಸ್ಟ್ರೈಕರ್ ದೀಪಿಕಾ ಗಳಿಸಿದ ಐದು ಗೋಲುಗಳ ನೆರವಿನಿಂದ ಭಾರತದ ಮಹಿಳಾ ತಂಡ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಥಾಯ್ಲೆಂಡ್ ತಂಡವನ್ನು 13-0 ಅಂತರದಿಂದ ಮಣಿಸಿತು. ಈ ಮೂಲಕ ಸೆಮಿ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿತು.

ಗುರುವಾರ ಸಂಪೂರ್ಣ ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ ಭಾರತ 13 ಗೋಲುಗಳನ್ನು ಗಳಿಸಿದರೆ, ಥಾಯ್ಲೆಂಡ್ ಒಂದೂ ಗೋಲು ಗಳಿಸಲಿಲ್ಲ.

ಭಾರತದ ಪರ ದೀಪಿಕಾ(3ನೇ, 19ನೇ, 43ನೇ, 45ನೇ, 46ನೇ ನಿಮಿಷ) 5 ಗೋಲುಗಳನ್ನು ಗಳಿಸಿದರೆ, ಪ್ರೀತಿ ದುಬೆ(9ನೇ, 40ನೇ ನಿ.), ಲಾಲ್‌ರೆಂಶಿಯಾಮಿ(12ನೇ, 56ನೇ ನಿ.)ಹಾಗೂ ಮನಿಶಾ ಚೌಹಾಣ್(55ನೇ, 58ನೇ ನಿ.)ತಲಾ 2 ಗೋಲು ಗಳಿಸಿದರು. ಬ್ಯೂಟಿ(30ನೇ ನಿ.) ಹಾಗೂ ನವನೀತ್ ಕೌರ್(53ನೇ ನಿ.)ತಲಾ ಒಂದು ಗೋಲು ಗಳಿಸಿ ರೌಂಡ್ ರಾಬಿನ್ ಲೀಗ್ ಹಂತದಲ್ಲಿ ಭಾರತ ತಂಡವು ಸತತ 3ನೇ ಗೆಲುವು ದಾಖಲಿಸಲು ನೆರವಾದರು.

ಭಾರತ ತಂಡವು ಶನಿವಾರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಚೀನಾ ತಂಡವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News