×
Ad

ಏಶ್ಯನ್ ಗೇಮ್ಸ್: ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನದ ಪದಕ ಜಯಿಸಿದ ಭಾರತ

Update: 2023-10-01 11:16 IST

Photo:X/@mansukhmandviya

ಹ್ಯಾಂಗ್ ಝೌ: ಮಹಿಳೆಯರ ಗಾಲ್ಫ್ ಪಂದ್ಯದಲ್ಲಿ ಅದಿತಿ ಅಶೋಕ್ ಚಾರಿತ್ರಿಕ ಬೆಳ್ಳಿ ಪದಕ ಜಯಿಸಿದ ನಂತರ ಭಾರತದ ಶೂಟರ್ ಗಳು ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಜಯಿಸಿದರು. ಇದರೊಂದಿಗೆ ಪುರುಷರ ಶಾಟ್ ಪುಟ್ ಫೈನಲ್ ನಲ್ಲಿ ತಜಿಂದರ್ ಪಾಲ್ ಸಿಂಗ್ ತೂರ್ ಹಾಗೂ ಸಾಹಿಬ್ ಸಿಂಗ್ ಸ್ಪರ್ಧಿಸಲಿದ್ದಾರೆ.

ಇದಲ್ಲದೆ ತಾರಾ ಆಟಗಾರರಾದ ಬಾಕ್ಸರ್ ನಿಖತ್ ಝರೀನ್, ಅಥ್ಲೀಟ್ ಗಳಾದ ಜ್ಯೋತಿ ಯರ್ರಾಜಿ ಹಾಗೂ ಅವಿನಾಶ್ ಸಬ್ಲೆ ಕೂಡಾ ಭಾರತದ ಪರವಾದ ಮುಖ್ಯ ಸ್ಪರ್ಧಿಗಳಾಗಿದ್ದಾರೆ. ಈಗಾಗಲೇ ಕಂಚು ಪದಕವನ್ನು ಖಾತ್ರಿಪಡಿಸಿಕೊಂಡಿರುವ ನಿಖತ್, ರವಿವಾರ ಅದಕ್ಕಿಂತ ಉತ್ತಮ ಪದಕದತ್ತ ತಮ್ಮ ಗುರಿ ಇಡಲಿದ್ದಾರೆ. ಇವರೊಂದಿಗೆ ಭಾರತದ ಶೂಟರ್ ಗಳೂ ಕೂಡಾ ಪದಕ ಬೇಟೆಗಾಗಿ ಮುಂಚೂಣಿಯಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News