ಮನೀಷಾ ಕೀರ್ | ಆಶಿಮಾ ಅಹ್ಲಾವತ್ | ನೀರು ದಂಡಾ Photo: x.com/KirenRijiju

ಹೊಸದಿಲ್ಲಿ / ನಗೋಯಾ: ಜಪಾನ್ ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ನಲ್ಲಿ ಮಂಗಳವಾರ ಶೂಟಿಂಗ್ ನ ಮಹಿಳೆಯರ ಟ್ರ್ಯಾಪ್ ತಂಡ ಸ್ಪರ್ಧೆಯಲ್ಲಿ ನೀರು ದಂಡಾ, ಆಶಿಮಾ ಅಹ್ಲಾವತ್ ಹಾಗೂ ಮನೀಷಾ ಕೀರ್ ಅವರನ್ನೊಳಗೊಂಡ ಭಾರತ ತಂಡ ಬೆಳ್ಳಿ ಪದಕ ಗೆದ್ದಿದೆ.

ಭಾರತ ತಂಡ ಒಟ್ಟು 328 ಅಂಕ ಗಳಿಸಿ ಎರಡನೇ ಸ್ಥಾನ ಪಡೆದಿದೆ. 325 ಅಂಕ ಗಳಿಸಿದ ಕುವೈತ್ ಕಂಚಿನ ಪದಕ ಗೆದ್ದರೆ, 346 ಅಂಕಗಳೊಂದಿಗೆ ಚೀನಾ ಚಿನ್ನದ ಪದಕ ಗೆದ್ದಿದೆ.

ಭಾರತದ ಪರ ನೀರು ಅತ್ಯುತ್ತಮ ವೈಯಕ್ತಿಕ ಪ್ರದರ್ಶನ ನೀಡಿದ್ದು, 125ರಲ್ಲಿ 118 ಅಂಕ ಗಳಿಸಿದರು. ಆಶಿಮಾ ಅಹ್ಲಾವತ್ 106 ಹಾಗೂ ಮನೀಷಾ ಕೀರ್ 104 ಅಂಕ ಗಳಿಸಿದರು.

ವೈಯಕ್ತಿಕ ಅರ್ಹತಾ ಸುತ್ತಿನಲ್ಲೂ ನೀರು ಗಮನಾರ್ಹ ಸಾಧನೆ ಮಾಡಿದ್ದು, ಖತರ್ ನ ರೇ ಬಸಿಲ್ ಅವರೊಂದಿಗೆ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ.

ಮಂಗಳವಾರ ನಡೆಯಲಿರುವ ವೈಯಕ್ತಿಕ ಫೈನಲ್ ನಲ್ಲಿ ನೀರು ದಂಡಾ ಕಣಕ್ಕಿಳಿಯಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor