Photo Credit : X 

ನಗೋಯ: ಭಾರತೀಯ ಮಹಿಳೆಯರ ಹಾಕಿ ತಂಡವು ಏಶ್ಯನ್ ಗೇಮ್ಸ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ್ದು, ಸೋಮವಾರ ನಡೆದ ‘ಬಿ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಇಂಡೋನೇಶ್ಯ ತಂಡವನ್ನು 17-1 ಅಂಕಗಳ ಅಂತರದಿಂದ ಮಣಿಸಿತು.

ಮೊದಲ ಪಂದ್ಯದಲ್ಲಿ ಉಜ್ಬೇಕಿಸ್ತಾನವನ್ನು 19-0 ಅಂತರದಿಂದ ಮಣಿಸಿದ್ದ ಭಾರತವು ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.

ದೀಪಿಕಾ ಸೆಹ್ರಾವತ್(8ನೇ, 28ನೇ, 40ನೇ ನಿಮಿಷ)ಹ್ಯಾಟ್ರಿಕ್ ಗೋಲು ಗಳಿಸಿದರು. ಕೇವಲ 2 ಪಂದ್ಯಗಳಲ್ಲಿ ಒಟ್ಟು 11 ಗೋಲು ಗಳಿಸಿದರು.

ನವನೀತ್ ಕೌರ್(35ನೇ, 56ನೇ, 57ನೇ ನಿ.)ಹಾಗೂ ಋತುಜಾ ಪಿಸಾಲ್(15ನೇ, 20ನೇ 38ನೇ ನಿಮಿಷ)ಹ್ಯಾಟ್ರಿಕ್ ಗೋಲು ಗಳಿಸಿದರು. ಸುನೆಲಿತಾ ಟೊಪ್ಪೊ(11ನೇ, 30ನೇ), ಲಾಲ್‌ರೆಂಸಿಯಾಮಿ(13ನೇ, 16ನೇ ನಿ.)ಹಾಗೂ ಸಾಕ್ಷಿ ರಾಣಾ(25ನೇ, 57ನೇ ನಿ.)ತಲಾ ಎರಡು ಗೋಲು ಗಳಿಸಿದರು. ನಾಯಕಿ ಸಲಿಮಾ ಟೇಟೆ(34ನೇ)ಹಾಗೂ ಇಶಿಕಾ ಚೌಧರಿ(36ನೇ)ತಲಾ ಒಂದು ಗೋಲು ಗಳಿಸಿದರು.

ಭಾರತ ತಂಡವು ಬುಧವಾರ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor