ಅಭಯ್ ಸಿಂಗ್ | Photo Credit : PTI 

ನಗೋಯ: ಏಶ್ಯನ್ ಗೇಮ್ಸ್‌ನಲ್ಲಿ, ಗುರುವಾರ ಸ್ಕ್ವಾಶ್ ಪುರುಷರ ತಂಡ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ತಂಡವು ಮಲೇಶ್ಯ ವಿರುದ್ಧ 1-2 ಅಂತರದಿಂದ ಸೋಲನುಭವಿಸಿತು. ಇದರೊಂದಿಗೆ ಅದು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ನಗೋಯದ ಕಿಂಜೊ ಫುಟೊ ಅರೆನಾದಲ್ಲಿ ನಡೆದ ಸ್ಪರ್ಧೆಯ ಮೊದಲ ಪಂದ್ಯದಲ್ಲಿ, ಭಾರತದ ಅಗ್ರ ಶ್ರೇಯಾಂಕದ ಅಭಯ್ ಸಿಂಗ್ ಮಲೇಶ್ಯದ ಎಯಿನ್ ಯೋ ಎನ್ಜಿ ವಿರುದ್ಧ 8-11, 8-11, 8-11 ನೇರ ಗೇಮ್‌ಗಳಿಂದ ಸೋಲು ಕಂಡರು. ಈ ಪಂದ್ಯವು ಇದೇ ಕೂಟದಲ್ಲಿ ಈ ಹಿಂದೆ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನ ಮರುಹೋರಾಟದಂತಿತ್ತು.

ಬಳಿಕ, ಭಾರತದ ವೀರ್ ಚೋಟ್ರಾನಿ ಅವರು ಮಲೇಶ್ಯದ ಜೀವ ಸಂಜಯ್ ವಿರುದ್ಧ 11-4, 11-8, 11-5 ಗೇಮ್‌ಗಳಿಂದ ಜಯಗಳಿಸಿ ಪಂದ್ಯವನ್ನು ಟೈಬ್ರೇಕರ್ ಹಂತಕ್ಕೆ ಕೊಂಡೊಯ್ದ್ದರು.

ಅಂತಿಮ ಪಂದ್ಯದಲ್ಲಿ, ಮಲೇಶ್ಯದ ಅಮೀಶೆನ್‌ರಾಜ್ ಚಂದ್ರನ್ ವಿರುದ್ಧ ಭಾರತದ ವೇಲವನ್ ಸೆಂಥಿಲ್‌ಕುಮಾರ್ 12-10, 6-11, 8-11, 9-11 ಗೇಮ್‌ಗಳ ಅಂತರದಿಂದ ಪರಾಭವಗೊಂಡರು ಹಾಗೂ ಮಲೇಶ್ಯ ಜಯ ದಾಖಲಿಸಿತು.

ಇದರೊಂದಿಗೆ ಮೂರು ವರ್ಷಗಳ ಹಿಂದಿನ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಭಾರತದ ಕನಸು ಭಗ್ನಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor