ನಿತೇಶ್ ಸಿವಾಚ್‌ | Photo Credit : X

ನಗೋಯ: ಏಶ್ಯನ್ ಗೇಮ್ಸ್‌ನಲ್ಲಿ ಗುರುವಾರ ಪುರುಷರ ಗ್ರೆಕೊ-ರೋಮನ್ ಕುಸ್ತಿಯ 97 ಕೆಜಿ ವಿಭಾಗದಲ್ಲಿ ಭಾರತದ ನಿತೇಶ್ ಸಿವಾಚ್ ಬೆಳ್ಳಿ ಗೆದ್ದಿದ್ದಾರೆ.

ನಗೋಯ ಸಿಟಿ ಐನೇ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಫೈನಲ್‌ನಲ್ಲಿ, ನಿತೇಶ್‌ರನ್ನು ಜಪಾನ್‌ನ ಯುರಿ ನಕಝಟೊ 4-0 ಅಂಕಗಳ ಅಂತರದಿಂದ ಸುಲಭವಾಗಿ ಸೋಲಿಸಿದರು.

ಇದು ಹಾಲಿ ಕ್ರೀಡಾಕೂಟದಲ್ಲಿ ಭಾರತದ ಎರಡನೇ ಗ್ರೆಕೊ-ರೋಮನ್ ಕುಸ್ತಿ ಪದಕವಾಗಿದೆ. ಇದಕ್ಕೂ ಮುನ್ನ, ಪುರುಷರ 87 ಕೆಜಿ ವಿಭಾಗದಲ್ಲಿ ಸುನಿಲ್ ಕುಮಾರ್ ಈಗಾಗಲೇ ಕಂಚಿನ ಪದಕ ಗೆದ್ದಿದ್ದಾರೆ.

ಈ ಹಿಂದೆ, 1962ರಲ್ಲಿ, ಭಾರತ ಏಶ್ಯನ್ ಗೇಮ್ಸ್‌ನಲ್ಲಿ ಗ್ರೆಕೊ-ರೋಮನ್ ಕುಸ್ತಿಯಲ್ಲಿ ಚಿನ್ನ ಗೆದ್ದಿತ್ತು.

ಇದಕ್ಕೂ ಮುನ್ನ, ನಿತೇಶ್ ಸೆಮಿಫೈನಲ್ ಪಂದ್ಯದಲ್ಲಿ ಮಂಗೋಲಿಯದ ಗಾಂಖುಯಾಗ್ ಗನ್‌ಬಾತರ್‌ರನ್ನು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ 9-0 ಅಂತರದಿಂದ ಸೋಲಿಸಿದ್ದರು.

ಚಿನ್ನ ಗೆದ್ದ ಕೊನೆಯ ಭಾರತೀಯ ಯಾರು?

1962ರ ಏಶ್ಯನ್ ಗೇಮ್ಸ್‌ನಲ್ಲಿ ಗಣಪತ್ ಅಂದಾಳ್ಕರ್ ಮತ್ತು ಮಾಲ್ವಾ ಸಿಂಗ್ ಭಾರತಕ್ಕೆ ಗ್ರೆಕೊ-ರೋಮನ್ ಕುಸ್ತಿಯಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು.

ಅಂದಾಳ್ಕರ್ ಪುರುಷರ +97 ಕೆಜಿ ವಿಭಾಗದಲ್ಲಿ ಚಿನ್ನದ ಜತೆಗೆ, ಅದೇ ತೂಕ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಬೆಳ್ಳಿ ಪದಕವನ್ನೂ ಗೆದ್ದಿದ್ದರು. ಸಿಂಗ್ 52 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು, ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕವನ್ನೂ ತನ್ನದಾಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor