Asian Games | ಬಾಕ್ಸಿಂಗ್ : ಸೆಮಿಫೈನಲ್‌ನಲ್ಲಿ ಪ್ರಿಯಾ, ಕಪಿಲ್ಗೆ ಸೋಲು
Photo Credit :x
ನಗೋಯ: ಏಶ್ಯನ್ ಗೇಮ್ಸ್‌ನಲ್ಲಿ, ಮಹಿಳೆಯರ ಬಾಕ್ಸಿಂಗ್ 60 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಬುಧವಾರ ಭಾರತದ ಪ್ರಿಯಾ ಘಂಘಾಸ್ ಚೀನಾದ ಯಾಂಗ್ ಚೆಂಗು ವಿರುದ್ಧ ಸೋಲನುಭವಿಸಿದರು.
ಪ್ರಿಯಾ 1-4 ಅಂಕಗಳ ಅಂತರದಿಂದ ಸೋಲನುಭವಿಸಿದ್ದು, ತನ್ನ ಚೊಚ್ಚಲ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
20 ವರ್ಷದ ಪ್ರಿಯಾ, ತಜಿಕಿಸ್ತಾನದ ಮಿಜ್ಗೊನಾ ಸಮದೋವಾ ವಿರುದ್ಧ 5-0 ಸರ್ವಾನುಮತದ ತೀರ್ಪಿನೊಂದಿಗೆ ಗೆದ್ದು ಸೆಮಿಫೈನಲ್ ತಲುಪಿದ್ದರು.
ಈ ವರ್ಷದ ಆರಂಭದಲ್ಲಿ, ಪ್ರಿಯಾ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಉಲಾನ್‌ಬಾತರ್‌ನಲ್ಲಿ ನಡೆದ ಏಶ್ಯನ್ ಬಾಕ್ಸಿಂಗ್ ಎಲಿಟ್ ಚಾಂಪಿಯನ್‌ಶಿಪ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕಳೆದ ವರ್ಷ ಬ್ಯಾಂಕಾಕ್‌ನಲ್ಲಿ ನಡೆದ 22 ವರ್ಷದೊಳಗಿನವರ ಬಾಕ್ಸಿಂಗ್ ಚಾಂಪಿಯನ್‌ಶಿಪ್ಸ್‌ನಲ್ಲಿ ಬೆಳ್ಳಿ ಪದಕವನ್ನೂ ಪಡೆದಿದ್ದರು.
ಇನ್ನೊಂದು ಪಂದ್ಯದಲ್ಲಿ, ಪುರುಷರ ಬಾಕ್ಸಿಂಗ್ 90 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಉಝ್ಬೆಕಿಸ್ತಾನದ ತುರಾಬೆಕ್ ಭಾರತದ ಕಪಿಲ್ ಪೊಖರಿಯಾರನ್ನು ಸೋಲಿಸಿದರು.
ಇದರೊಂದಿಗೆ, ಅವರಿಗೆ ಕಂಚಿನ ಪದಕ ಖಾಯಂ ಆಯಿತು.