Photo Credit : KKPL 

ಬೆಂಗಳೂರು: ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (ಕೆಕೆಪಿಎಲ್) ಮೊದಲ ಆವೃತ್ತಿಗೆ ಗುರುವಾರ ಚಾಲನೆ ದೊರೆಯಲಿದೆ.

2014ರಿಂದ ದೇಶಾದ್ಯಂತ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಮಾದರಿಯಲ್ಲಿಯೇ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್‌ಅನ್ನು ಆಯೋಜಿಸಲಾಗುತ್ತಿದೆ.

ರಾಜ್ಯದ ಪ್ರತಿಭಾನ್ವಿತ ಕಬಡ್ಡಿ ಆಟಗಾರರಿಗೆ ವೇದಿಕೆ ಕಲ್ಪಿಸುವ ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಪ್ರೋತ್ಸಾಹಿಸುವ ಉದ್ದೇಶದಿಂದ ಮೊದಲ ಬಾರಿಗೆ ಕೆಕೆಪಿಎಲ್ ಅನ್ನು ಪರಿಚಯಿಸಲಾಗಿದೆ.

ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 1ರಿಂದ 8ರವರೆಗೆ ನಡೆಯಲಿರುವ ಎಂಟು ದಿನಗಳ ಕಬಡ್ಡಿ ಉತ್ಸವವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಆರೋಗ್ಯ ಸಚಿವ ಯು.ಟಿ. ಖಾದರ್, ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಹಾಗೂ ಭಾರತ ಮತ್ತು ಪಿಕೆಎಲ್ ಕೋಚ್ ಬಿ.ಸಿ. ರಮೇಶ್ ಉಪಸ್ಥಿತರಿರುತ್ತಾರೆ.

ಪಂದ್ಯಾವಳಿಯಲ್ಲಿ ರಾಜ್ಯದ ಯುವ ಮತ್ತು ಅನುಭವಿ ಆಟಗಾರರನ್ನು ಒಳಗೊಂಡ ಎಂಟು ತಂಡಗಳು ಸ್ಪರ್ಧಿಸಲಿವೆ.

ತಂಡಗಳು: ಉತ್ತರ ಕನ್ನಡ ಸ್ಟಾಲ್ ಲಯನ್ಸ್, ವಿಜಯಪುರ ಲಯನ್ಸ್, ಮೈಸೂರು ಮಹಾಸೇನೆ, ಮಂಗಳೂರು ಇಂಡಿಯನ್ಸ್, ಚಾಲುಕ್ಯ ಸೇನೆ ಬಾಗಲಕೋಟೆ, ಬೆಂಗಳೂರು ಬೈಸನ್ಸ್, ಬೆಳಗಾವಿ ಬುಲ್ಸ್ ಮತ್ತು ಹೊಯ್ಸಳ ಎಂಪೈರ್ ಹಾಸನ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor