×
Ad

ಮಹಿಳಾ ಕಬಡ್ಡಿ: ಭಾರತ-ಚೈನೀಸ್ ತೈಪೆ ಪಂದ್ಯ ಡ್ರಾ

Update: 2023-10-02 21:44 IST

Photo : PTI 

ಚೀನಾದ ಹಾಂಗ್‌ ಝೌನಲ್ಲಿ ನಡೆಯುತ್ತಿರುವ 19ನೇ ಏಶ್ಯನ್ ಗೇಮ್ಸ್ ನ ಮಹಿಳೆಯರ ಕಬಡ್ಡಿಯಲ್ಲಿ, ‘ಎ’ ಗುಂಪಿನ ಸ್ಪರ್ಧೆಯೊಂದರಲ್ಲಿ ಸೋಮವಾರ ಭಾರತವು ಚೈನೀಸ್ ತೈಪೆಯೊಂದಿಗೆ 34-34 ಅಂಕಗಳೊಂದಿಗೆ ಡ್ರಾ ಮಾಡಿಕೊಂಡಿದೆ.

ಚೈನೀಸ್ ತೈಪೆ ತಂಡವು ಪಂದ್ಯದುದ್ದಕ್ಕೂ ಭಾರತವನ್ನು ಒತ್ತಡದಲ್ಲಿರಿಸಿತು. ಅಂತಿಮ ರೈಡ್ ನಲ್ಲಿ ಚೈನೀಸ್ ತೈಪೆಯು ಬೋನಸ್ ಅಂಕವೊಂದನ್ನು ಪಡೆದು ಪಂದ್ಯವನ್ನು ಡ್ರಾಗೊಳಿಸಿತು.

ಇನ್ನು ಭಾರತವು ಮಂಗಳವಾರ ದಕ್ಷಿಣ ಕೊರಿಯವನ್ನು ಎದುರಿಸಲಿದೆ. ಸೋಮವಾರ ಭಾರತದ ಆರಂಭವು ಉತ್ತಮವಾಗಿರಲಿಲ್ಲ. ಆದರೆ, ಬಳಿಕ ಚೇತರಿಸಿಕೊಂಡ ಅದು ಮೊದಲಾರ್ಧದ ಕೊನೆಯ ಹೊತ್ತಿಗೆ ಎದುರಾಳಿಗಿಂತ ಮುಂದಿತ್ತು. ಮೊದಲಾರ್ಧದ ಕೊನೆಯ ವೇಳೆಗೆ ಭಾರತವು 17-15ರಿಂದ ಮುಂದಿತ್ತು.

ಒಂದು ಹಂತದಲ್ಲಿ ಭಾರತವು 26-20ರ ಮುನ್ನಡೆಯನ್ನು ಹೊಂದಿತ್ತು. ಆದರೆ ಚೈನೀಸ್ ತೈಪೆ ಬಳಿಕ ತೀವ್ರ ಪ್ರತಿಹೋರಾಟ ನೀಡಿ ಅಂಕಗಳನ್ನು ಸಮಬಲಗೊಳಿಸಿತು. ಅಂತಿಮವಾಗಿ ಭಾರತ 34 ಅಂಕಗಳನ್ನು ಗಳಿಸಿತು. ತೀವ್ರ ಪ್ರತಿ ಹೋರಾಟ ನೀಡಿದ ಚೈನೀಸ್ ತೈಪೆ ಕೂಡ 34 ಅಂಕಗಳನ್ನು ಗಳಿಸಿ ಪಂದ್ಯವನ್ನು ಸಮಬಲಗೊಳಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News