×
Ad

ಏಶ್ಯನ್ ಗೇಮ್ಸ್ | ಭಾರತದ ಟೆನಿಸ್ ತಂಡಕ್ಕೆ ಸುಮಿತ್, ಸಹಜಾ ಯಮಲಾಪಲ್ಲಿ ಸಾರಥ್ಯ

Update: 2026-06-16 23:55 IST

Photo Credit NDTV : ಸುಮಿತ್ ನಾಗಲ್

ಹೊಸದಿಲ್ಲಿ, ಜೂ.16: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರರಾದ ಸುಮಿತ್ ನಾಗಲ್ ಹಾಗೂ ಸಹಜಾ ಯಮಲಪಲ್ಲಿ ಜಪಾನಿನಲ್ಲಿ ಈ ವರ್ಷ ನಡೆಯಲಿರುವ 20ನೇ ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲಿ ದೇಶದ ಟೆನಿಸ್ ಅಭಿಯಾನವನ್ನು ಮುನ್ನಡೆಸಲಿದ್ದಾರೆ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ)ಸೋಮವಾರ ತಿಳಿಸಿದೆ.

ನಂದನ್ ಬಾಲಾ ಅಧ್ಯಕ್ಷತೆಯಲ್ಲಿ ಎಐಟಿಎ ಆಯ್ಕೆ ಸಮಿತಿಯು ಆರು ಸದಸ್ಯರನ್ನು ಒಳಗೊಂಡ ಪುರುಷರ ಹಾಗೂ ಮಹಿಳೆಯರ ತಂಡವನ್ನು ಪ್ರಕಟಿಸಿದೆ.

ಪುರುಷರ ವಿಭಾಗದ ಸಿಂಗಲ್ಸ್ ತಂಡದಲ್ಲಿ ವಿಶ್ವದ ನಂ.277ನೇ ರ್ಯಾಂಕಿನ ಸುಮಿತ್, ಮಾನಸ್ ಧಾಮ್ನೆ(378ನೇ ರ್ಯಾಂಕ್), ಡೇವಿಸ್ ಕಪ್ ಪಂದ್ಯದ ಹೀರೊ ದಕ್ಷಿಣೇಶ್ವರ ಸುರೇಶ್(478ನೇ ರ್ಯಾಂಕ್)ಅವರಿದ್ದಾರೆ. ಡಬಲ್ಸ್‌ನಲ್ಲಿ ಯೂಕಿ ಭಾಂಬ್ರಿ(ವಿಶ್ವದ ನಂ.24), ಎನ್.ಶ್ರೀರಾಮ್ ಬಾಲಾಜಿ(ವಿಶ್ವದ ನಂ.61)ಹಾಗೂ ಅನಿರುದ್ಧ ಚಂದ್ರಶೇಖರ(ವಿಶ್ವದ ನಂ.90)ಅವರಿದ್ದಾರೆ.

ಮಹಿಳೆಯರ ವಿಭಾಗದ ಸಿಂಗಲ್ಸ್ ತಂಡದಲ್ಲಿ ಭಾರತದ ನಂ.1 ಹಾಗೂ ವಿಶ್ವದ ನಂ.332ನೇ ಆಟಗಾರ್ತಿ ಸಹಜಾ, ವೈಷ್ಣವಿ ಅಡ್ಕರ್(396), ವೈದೇಹಿ ಚೌಧರಿ(417)ಅವರಿದ್ದಾರೆ.

ಋತುಜಾ ಭೋಂಸ್ಲೆ(125ನೇ ರ್ಯಾಂಕ್), ಪ್ರಾರ್ಥನಾ(181ನೇ) ಹಾಗೂ ಅಂಕಿತಾ ರೈನಾ(185ನೇ)ಡಬಲ್ಸ್ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.

ಏಶ್ಯನ್ ಗೇಮ್ಸ್ ಸೆಪ್ಟಂಬರ್ 19ರಿಂದ ಅಕ್ಟೋಬರ್ 4ರ ತನಕ ಜಪಾನ್‌ನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News