ಏಶ್ಯನ್ ಪ್ಯಾರಾ ಗೇಮ್ಸ್ | 10 ಕ್ರೀಡೆಗಳಲ್ಲಿ 166 ಕ್ರೀಡಾಪಟುಗಳನ್ನು ಕಣಕ್ಕಿಳಿಸಲಿರುವ ಭಾರತ
Photo Credit : PTI
ಹೊಸದಿಲ್ಲಿ: ಜಪಾನಿನ ಐಚಿ-ನಗೋಯದಲ್ಲಿ ನಡೆಯಲಿರುವ 2026ರ ಆವೃತ್ತಿಯ ಏಶ್ಯನ್ ಪ್ಯಾರಾ ಗೇಮ್ಸ್‌ಗೆ 10 ಕ್ರೀಡೆಗಳಲ್ಲಿ 166 ಕ್ರೀಡಾಪಟುಗಳನ್ನು ಭಾರತ ಕಳುಹಿಸಿಕೊಡಲಿದೆ. ಕ್ರೀಡಾ ಸಚಿವಾಲಯವು ಅಕ್ಟೋಬರ್ 18ರಿಂದ 24ರ ತನಕ ನಡೆಯಲಿರುವ ಗೇಮ್ಸ್‌ಗೆ 275 ಸದಸ್ಯರ ತಂಡವು ತೆರಳಲು ಅನುಮೋದನೆ ನೀಡಿದೆ.
ಅನುಮತಿ ನೀಡಿರುವ ಪಟ್ಟಿಯಲ್ಲಿ ಬಿಲ್ಲುಗಾರ್ತಿ ಶೀತಲ್ ದೇವಿ, ಬ್ಯಾಡ್ಮಿಂಟನ್ ಸ್ಟಾರ್‌ಗಳಾದ ಪ್ರಮೋದ್ ಭಗತ್ ಹಾಗೂ ಸುಹಾಸ್ ಯತಿರಾಜ್ ಹಾಗೂ ಪ್ಯಾರಾ ಟೇಬಲ್-ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಅವರಿದ್ದಾರೆ.
ಭಾರತ ತಂಡದಲ್ಲಿ 111 ಪುರುಷರು ಹಾಗೂ 55 ಮಹಿಳಾ ಅತ್ಲೀಟ್‌ಗಳಿದ್ದಾರೆ. ಇವರ ಜೊತೆಗೆ 94 ಟೀಮ್ ಅಧಿಕಾರಿಗಳು ಹಾಗೂ ಸಹಾಯಕ ಸಿಬ್ಬಂದಿ, 15 ಕಾಂಟಿನೆಂಟ್ ಸ್ಟಾಫ್ ಸದಸ್ಯರಿದ್ದಾರೆ. ಪ್ಯಾರಾ ಅತ್ಲೀಟ್‌ಗಳು ದೊಡ್ಡ ಸಂಖ್ಯೆಯಲ್ಲಿ ಒಟ್ಟು 62 ಕ್ರೀಡಾಪಟುಗಳಿದ್ದಾರೆ. ಅ ನಂತರ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ 28 ಹಾಗೂ ಪ್ಯಾರಾ ಸ್ವಿಮ್ಮಿಂಗ್‌ನಲ್ಲಿ 16 ಮಂದಿ ಅತ್ಲೀಟ್‌ಗಳಿದ್ದಾರೆ. ಪ್ಯಾರಾ ಶೂಟಿಂಗ್‌ನಲ್ಲಿ 13 ಅತ್ಲೀಟ್‌ಗಳು, ಪ್ಯಾರಾ ಆರ್ಚರಿ ಹಾಗೂ ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಕ್ರಮವಾಗಿ 11 ಹಾಗೂ 10 ಅತ್ಲೀಟ್‌ಗಳಿದ್ದಾರೆ.
ಇನ್ನುಳಿದ ಕ್ರೀಡೆಗಳಾದ ಅಂಧರ ಫುಟ್ಬಾಲ್(10) ಪ್ಯಾರಾ-ಪವರ್‌ಲಿಫ್ಟಿಂಗ್(8), ಪ್ಯಾರಾ ಜುಡೋ(7) ಹಾಗೂ ಪ್ಯಾರಾ ಸೈಕ್ಲಿಂಗ್(1)ಇದ್ದಾರೆ.
ಶೀತಲ್ ದೇವಿ, ಪ್ರಮೋದ್ ಭಗತ್ ಪ್ರಮುಖ ಕ್ರೀಡಾಳುಗಳು
ಈ ಹಿಂದಿನ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅವಳಿ ಚಿನ್ನದ ಪದಕ ವಿಜೇತೆ ಶೀತಲ್ ದೇವಿ ಹಾಗೂ 18ರ ವಯಸ್ಸಿನ ಪಾಯಲ್ ನಾಗ್ ಈ ಬಾರಿ ಭಾರತದ ಆರ್ಚರಿ ವಿಭಾಗದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.
ಬ್ಯಾಡ್ಮಿಂಟನ್‌ನಲ್ಲಿ ವಿಶ್ವದ ಮಾಜಿ ನಂ.1 ಹಾಗೂ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಪ್ರಮೋದ್ ಭಗತ್ ಅವರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ, ಕನ್ನಡಿಗ ಸುಹಾಸ್ ಯತಿರಾಜ್ ಸಾಥ್ ನೀಡಲಿದ್ದಾರೆ.
ಭಾರತದ ಪ್ಯಾರಾ ಟೇಬಲ್ ಟೆನಿಸ್ ತಂಡದಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಭಾವಿನಾ ಬೆನ್ ಪಟೇಲ್ ಅವರಿದ್ದಾರೆ. ಶೂಟಿಂಗ್ ತಂಡದಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ ಅವನಿ ಲೇಖರ ಹಾಗೂ ಇತ್ತೀಚೆಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಮೋನಾ ಅಗರ್ವಾಲ್ ಅವರಿದ್ದಾರೆ.
1.ಪ್ಯಾರಾ ಟೇಬಲ್ ಟೆನಿಸ್-10 ಅತ್ಲೀಟ್‌ಗಳು
ಮಹಿಳೆಯರು(6): ಭಾವಿನಾಬೆನ್ ಪಟೇಲ್, ಸೋನಾಲ್‌ಬೆನ್ ಪಟೇಲ್, ಬಾಬಿ ಸಹಾನಾ ರವಿ, ಏಕ್ತಾ ಭ್ಯಾನ್, ಪ್ರಾಚಿ ಪಾಂಡೆ, ಸವಿತಾ ಅಜ್ಜನಕಟ್ಟಿ.
ಪುರುಷರು(4): ದತ್ತಪ್ರಸಾದ್ ಚೌಗುಲೆ, ಸಂದೀಪ್ ದಾಂಗಿ, ಜೆಹಾನ್ ಮದನ್, ಶುಭಂ.
2. ಪ್ಯಾರಾ ಬ್ಯಾಡ್ಮಿಂಟನ್-28 ಅತ್ಲೀಟ್‌ಗಳು
ಮಹಿಳೆಯರು(11): ಮನಿಶಾ ರಾಮ್‌ದಾಸ್, ನಿತ್ಯಾ ಶ್ರೀ, ಅಲ್ಫಿಯಾ ಜೇಮ್ಸ್, ತುಳಸಿಮತಿ ಮುರುಗೇಶನ್, ಮನ್‌ದೀಪ್ ಕೌರ್, ನೀರಜ್, ಶಾಂತಿ ವಿಶ್ವನಾಥನ್,ಕನಕ್ ಸಿಂಗ್, ಮಾನಸಿ ಜೋಶಿ, ಪಲ್ಲವಿ ರೆಡ್ಡಿ, ಸಂಜನಾ ಕುಮಾರಿ.
ಪುರುಷರು(17): ನವೀನ್, ನಿತೇಶ್, ಕೃಷ್ಣ ನಗರ್, ಪ್ರಮೋದ್ ಭಗತ್, ಸುಕಾಂತ್ ಕದಮ್, ಸೂರ್ಯಕಾಂತ್, ಋತಿಕ್ ರಘುಪತಿ, ಶಿವರಂಜನ್, ಅಬು ಹುಬೈದಾ, ಪ್ರೇಮ ಕುಮಾರ್, ಸುದರ್ಶನ್, ಉಮೇಶ್ ಕುಮಾರ್, ಹಾರಿಸ್ ಮೈಥಿಲಿ, ಹಾರ್ದಿಕ್ ಮಕ್ಕರ್, ಅಭಿಜೀತ್ ಸುಖುಜಾ, ರಾಕೇಶ್ ಪಾಂಡೆ, ಸುಹಾಸ್ ಲಲಿನಕೆರೆ ಯತಿರಾಜ್.
3. ಪ್ಯಾರಾ ಆರ್ಚರಿ-11 ಅತ್ಲೀಟ್‌ಗಳು
ಮಹಿಳೆಯರು(5): ಶೀತಲ್ ದೇವಿ, ಪಾಯಲ್ ನಾಗ್, ಬಾವನಾ, ಪೂಜಾ, ಸ್ವಾತಿ
ಪುರುಷರು(6): ಹರ್ವಿಂದರ್ ಸಿಂಗ್, ವಿಜಯ್ ಸುಂಡಿ, ಟೋಮನ್ ಕುಮಾರ್, ಶ್ಯಾಮ್ ಸುಂದರ್, ಆದಿಲ್ ಮುಹಮ್ಮದ್, ವಿನಾಯಕ್ ಬ್ರೀಡ್
4.ಪ್ಯಾರಾ ಜುಡೋ-7 ಅತ್ಲೀಟ್‌ಗಳು
ಮಹಿಳೆಯರು(5): ರೇಣುಕಾ ನಾರಾಯಣ, ಕೋಕಿಲಾ, ಗುಲ್ಶನ್, ವೃಶಾಲಿ ಮೋರೆ, ಡಿಂಪಲ್
ಪುರುಷರು(2): ಕಪಿಲ್ ಪಾರ್ಮರ್, ಬಿಜೇಂದರ್.
5. ಪ್ಯಾರಾ-ಸ್ವಿಮ್ಮಿಂಗ್-16 ಅತ್ಲೀಟ್‌ಗಳು
ಮಹಿಳೆಯರು(2): ವೈಷ್ಣವಿ ಜಗತಾಪ್, ದೇವಾಂಶಿ.
ಪುರುಷರು(14): ಕಪಿಲ್ ಕುಮಾರ್, ಅಜಯ್ ಭೋಂಸ್ಲೆ, ರವಿವೀರ, ಅಬ್ದುಲ್ ಖಾದಿರ್, ಸುಯಶ್ ಜಾಧವ್, ಚೈತನ್ಯ ಕುಲಕರ್ಣಿ, ರೋಹಿತ್ ಕುಮಾರ್, ಗೋಪಿಚಂದ್, ವಂಗಾ ಮುಕುಂದನ್, ತೇಜಸ್ ನಂದಕುಮಾರ್, ಹಿಮಾಂಶು ನಂದಲ್, ಸ್ವಾತಿಕ್ ಪಾಟೀಲ್, ಮುಹಮ್ಮದ್ ಶಮ್ಸ್, ಜಹಾಂಗೀರ್ ಮೊಲ್ಲಾ.
6.ಪ್ಯಾರಾ ಶೂಟಿಂಗ್-13 ಅತ್ಲೀಟ್‌ಗಳು
ಮಹಿಳೆಯರು(6): ಅವನಿ ಲೇಖರ, ಮೋನಾ ಅಗರ್ವಾಲ್, ಭಕ್ತಿ ಶರ್ಮಾ, ರುಬಿನಾ ಫ್ರಾನ್ಸಿಸ್, ಸೃಷ್ಟಿ ಅರೋರ, ಸುಮೇಧಾ ಪಾಠಕ್.
ಪುರುಷರು(7): ಆನಂದ ಕೃಷ್ಣ, ಆಮಿರ್ ಅಹ್ಮದ್ ಭಟ್, ಮನೀಶ್ ನರ್ವಾಲ್, ನಿಹಾಲ್ ಸಿಂಗ್, ರಾಕೇಶ್ ನಿದಗುಂಡಿ, ರುದ್ರಾಂಕ್ಷ್, ಸ್ವರೂಪ್ ಉನ್ಹಾಲ್ಕರ್.
7. ಪ್ಯಾರಾ ಪವರ್‌ಲಿಫ್ಟಿಂಗ್-8 ಅತ್ಲೀಟ್‌ಗಳು
ಮಹಿಳೆಯರು(4): ಸುಮನ್ ದೇವಿ, ಕಸ್ತೂರಿ ರಾಜಮಣಿ, ಜಸ್‌ಪ್ರೀತ್ ಕೌರ್, ಸೀಮಾ ರಾಣಿ.
ಪುರುಷರು(4):ಅಶೋಕ್, ಜಂಡೂಕುಮಾರ್, ಮನೀಶ್ ಕುಮಾರ್, ಪರಮ್‌ಜೀತ್ ಕುಮಾರ್.
8. ಬ್ಲೈಂಡ್ ಫುಟ್ಬಾಲ್-10 ಅತ್ಲೀಟ್‌ಗಳು
ಪುರುಷರು(10): ಮರ್ಬಾಮ್, ಕ್ಲಿಂಗ್‌ಸನ್ ಮರಾಕ್, ಪ್ರದೀಪ್ ಪಟೇಲ್, ಸಾಹಿಲ್, ಶಿವಂ ಸಿಂಗ್, ಸೊವೇಂದ್ರ ಸಿಂಗ್, ತುಷಾರ್ ಕುಮಾರ್, ವಿಷ್ಣುಭಾತೇಜುಬಾ ವಘೇಲ, ಆದಿತ್ಯ ಸಾಜ್ವನ್(ಗೋಲ್‌ಕೀಪರ್), ಸುಜಿತ್(ಗೋಲ್‌ಕೀಪರ್).
ಭಾರತದ ಏಶ್ಯನ್ ಪ್ಯಾರಾ ಗೇಮ್ ತಂಡ
ಒಟ್ಟು ಅತ್ಲೀಟ್‌ಗಳು: 166
ಪುರುಷ ಅತ್ಲೀಟ್‌ಗಳು: 111
ಮಹಿಳಾ ಅತ್ಲೀಟ್‌ಗಳು: 55
ಕ್ರೀಡೆಗಳು: 10
ತಂಡದ ಒಟ್ಟು ಸಂಖ್ಯೆ: 275
ಟೀಮ್ ಅಧಿಕಾರಿಗಳು ಹಾಗೂ ಸಹಾಯಕ ಸಿಬ್ಬಂದಿ: 94
ಕಾಂಟಿನೆಂಟ್ ಸ್ಟಾಫ್: 15
ಸ್ಪರ್ಧೆಯ ದಿನಾಂಕ: ಅಕ್ಟೋಬರ್ 18ರಿಂದ 24, 2026
ಆತಿಥೇಯ ನಗರ: ಐಚಿ-ನಗೋಯ, ಜಪಾನ್.