ISSF ವಿಶ್ವಕಪ್ | ಚಿನ್ನ ಜಯಿಸಿದ ಉದಯವೀರ್ ಸಿಧು
ISSF Photo
ಹೊಸದಿಲ್ಲಿ, ಅ. 11: ಈಜಿಪ್ಟ್ ನ ಕೈರೊದಲ್ಲಿ ರವಿವಾರ ನಡೆದ ಐಎಸ್ಎಸ್ಎಫ್ ವಿಶ್ವಕಪ್‌ನ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಉದಯವೀರ್ ಸಿಧು ಚಿನ್ನದ ಪದಕ ಜಯಿಸಿದ್ದಾರೆ.
24 ವರ್ಷದ ಶೂಟರ್ ಸಿಧು ಒಟ್ಟು 240.6 ಅಂಕ ಗಳಿಸಿದ್ದು, ಎರಡನೇ ಸ್ಥಾನ ಪಡೆದ ಜರ್ಮನಿಯ ಕ್ರಿಸ್ಟಿಯನ್ ರೆಝ್ ಗಿಂತ 0.5 ಅಂಕ ಮುನ್ನಡೆ ಸಾಧಿಸಿದರು. ಇಟಲಿಯ ಪಾಯೊಲೊ ಮೊನ್ನಾ 219.8 ಅಂಕಗಳೊಂದಿಗೆ ಕಂಚಿನ ಪದಕ ಜಯಿಸಿದರು.
ಇದು ಉದಯವೀರ್ ಸಿಧು ಐಎಸ್ಎಸ್ಎಫ್ ವಿಶ್ವಕಪ್ ನಲ್ಲಿ ಗೆದ್ದಿರುವ ಮೊದಲ ಪದಕವಾಗಿದೆ. ಈ ಸ್ಪರ್ಧೆಯಲ್ಲಿ ಭಾರತ ಜಯಿಸಿರುವ ಮೊದಲ ಪದಕ ಇದಾಗಿದೆ.
ಅರ್ಹತಾ ಸುತ್ತಿನಲ್ಲಿ ಮೊನ್ನಾ, ರೆಝ್ ಹಾಗೂ ಸಹ ಆಟಗಾರ ಜೋನಾಥನ್ ಗವಿನ್ ಅಂಥೋನಿ ನಂತರ ನಾಲ್ಕನೇ ಸ್ಥಾನ ಪಡೆದು ಉದಯವೀರ್ ಫೈನಲ್‌ಗೆ ತಲುಪಿದ್ದರು. ಅಂಥೋನಿ ಕೇವಲ ರ‍್ಯಾಂಕಿಂಗ್ ಪಾಯಿಂಟ್‌ಗಳಿಗಾಗಿ ಆಡಿದ್ದು, ಪದಕ ಸುತ್ತಿನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿಲ್ಲ.