×
Ad

ಏಶ್ಯನ್ ಶೂಟಿಂಗ್ ಚಾಂಪಿಯನ್‌ ಶಿಪ್ಸ್ | ಅರ್ಜುನ್-ಇಳವೆನಿಲ್ ಜೋಡಿಗೆ ಚಿನ್ನ

Update: 2025-08-23 20:43 IST

PC : X \ @SportsArena1234

ಶೈಮ್ಕೆಂಟ್(ಕಝಕಿಸ್ತಾನ), ಆ.23: ಭಾರತದ ಅರ್ಜುನ್ ಬಬುಟ ಹಾಗೂ ಇಳವೆನಿಲ್ ವಳರಿವಾನ್ ಕಝಕ್‌ಸ್ತಾನದ ಶೈಮ್ಕೆಂಟ್‌ ನಲ್ಲಿ ಶನಿವಾರ ನಡೆದ 16ನೇ ಆವೃತ್ತಿಯ ಏಶ್ಯನ್ ಶೂಟಿಂಗ್ ಚಾಂಪಿಯನ್‌ ಶಿಪ್‌ ನ 10 ಮೀ. ಏರ್ ರೈಫಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ.

ಭಾರತೀಯ ಜೋಡಿ ಚೀನಾದ ಡಿಂಗ್‌ ಕೆ ಲು ಹಾಗೂ ಕ್ಸಿನ್‌ಲು ಪೆಂಗ್‌ರನ್ನು 17-11 ಅಂತರದಿಂದ ಮಣಿಸಿ ಮೊದಲ ಸ್ಥಾನ ಪಡೆದರು.

ಚೀನಾದ ಶೂಟರ್‌ಗಳು ಆರಂಭಿಕ ಸುತ್ತಿನಲ್ಲಿ ಮುನ್ನಡೆ ಪಡೆದರು. ಆದರೆ ಭಾರತೀಯ ಜೋಡಿ ಆ ನಂತರ ಪುಟಿದೆದ್ದು ಚಿನ್ನದ ಪದಕ ಬಾಚಿಕೊಂಡಿತು.

10 ಮೀ. ಏರ್ ರೈಫಲ್ ಮಹಿಳೆಯರ ಸ್ಪರ್ಧಾವಳಿಯಲ್ಲಿ ಅಗ್ರ ಸ್ಥಾನ ಪಡೆದಿದ್ದ ಇಳವೆನಿಲ್ ಪ್ರಸಕ್ತ ಚಾಂಪಿಯನ್‌ಶಿಪ್‌ನಲ್ಲಿ 2ನೇ ಚಿನ್ನದ ಪದಕ ಗೆದ್ದುಕೊಂಡರು.

ಇದಕ್ಕೂ ಮೊದಲು ಭಾರತದ ಅರ್ಜುನ್ ಬಬುಟ, ರುದ್ರಾಂಕ್ಷ್ ಪಾಟೀಲ್ ಹಾಗೂ ಕಿರಣ್ ಜಾಧವ್ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News