×
Ad

ಚೆಂಡು ಬಡಿದು ಆಸ್ಟ್ರೇಲಿಯದ ಕಿರಿಯ ಕ್ರಿಕೆಟಿಗ ನಿಧನ

Update: 2025-10-30 21:04 IST

Image credit:X/jacstanley


ಮೆಲ್ಬರ್ನ್, ಅ.30: ಆಸ್ಟ್ರೇಲಿಯದ ಭರವಸೆಯ ಯುವ ಕ್ರಿಕೆಟಿಗನೊಬ್ಬ ಚೆಂಡು ಬಡಿದು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಕ್ಲಬ್ ಗುರುವಾರ ತಿಳಿಸಿದೆ.

ಮಂಗಳವಾರ ಮೆಲ್ಬರ್ನ್‌ನಲ್ಲಿ ನಡೆದ ಟ್ವೆಂಟಿ20 ಪಂದ್ಯಕ್ಕೂ ಮೊದಲು ಹೆಲ್ಮೆಟ್ ಧರಿಸಿ ನೆಟ್‌ನಲ್ಲಿ ಸ್ವಯಂಚಾಲಿತ ಬೌಲಿಂಗ್ ಯಂತ್ರದ ಎದುರು ಅಭ್ಯಾಸ ನಡೆಸುತ್ತಿದ್ದಾಗ 17ರ ವಯಸ್ಸಿನ ಬೆನ್ ಆಸ್ಟಿನ್ ತಲೆ ಹಾಗೂ ಕುತ್ತಿಗೆಗೆ ಚೆಂಡಿನ ಏಟು ಬಿದ್ದಿದೆ ಎಂದು ವರದಿಯಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ಆಸ್ಟಿನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಬುಧವಾರ ನಿಧನರಾಗಿದ್ದಾರೆ.

‘‘ಬೆನ್ ಆಸ್ಟಿನ್ ಅವರ ನಿಧನದಿಂದ ನಾವು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇವೆ. ಅವರ ನಿಧನದಿಂದ ನಮ್ಮ ಕ್ರಿಕೆಟ್ ಸಮುದಾಯ ಆಘಾತಕ್ಕೊಳಗಾಗಿದೆ. ಆಸ್ಟಿನ್ ಒಬ್ಬ ಉದಯೋನ್ಮುಖ ಬೌಲರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದರು. ಅವರೊಬ್ಬ ಸ್ಟಾರ್ ಕ್ರಿಕೆಟಿಗ, ಮಹಾನ್ ನಾಯಕನಾಗಿದ್ದಾರೆ’’ ಎಂದು ಫರ್ನ್‌ಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್ ಪ್ರಕಟನೆಯಲ್ಲಿ ತಿಳಿಸಿದೆ.

2014ರಲ್ಲಿ ಅಸ್ಟ್ರೇಲಿಯದ ಟೆಸ್ಟ್ ಕ್ರಿಕೆಟಿನ ಸ್ಟಾರ್ ಆಟಗಾರ ಫಿಲಿಪ್ ಹ್ಯೂಸ್ ದೇಶೀಯ ಕ್ರಿಕೆಟ್ ಪಂದ್ಯವನ್ನು ಆಡುತ್ತಿದ್ದಾಗ ಕುತ್ತಿಗೆ ಭಾಗಕ್ಕೆ ಚೆಂಡು ಬಡಿದ ಪರಿಣಾಮ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News