×
Ad

ಏಕದಿನ ವಿಶ್ವಕಪ್ ಗೆ ಆಸ್ಟ್ರೇಲಿಯ ತಂಡ ಪ್ರಕಟ: ಲ್ಯಾಬುಶೇನ್ ಗೆ ಸ್ಥಾನವಿಲ್ಲ

Update: 2023-09-06 10:47 IST

Pat Cummins, Photo: Twitter

ಸಿಡ್ನಿ: ಕ್ರಿಕೆಟ್ ಆಸ್ಟ್ರೇಲಿಯಾ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಬುಧವಾರ ಆಸ್ಟ್ರೇಲಿಯ ತಂಡವನ್ನು ಪ್ರಕಟಿಸಿದೆ. ತಂಡಕ್ಕೆ ಪ್ಯಾಟ್ ಕಮಿನ್ಸ್ ನೇತೃತ್ವ ವಹಿಸಲಿದ್ದಾರೆ.

ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್ ವೆಲ್ ಮುಂತಾದ ಹಿರಿಯ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಆದರೆ ಮಾರ್ನಸ್ ಲ್ಯಾಬುಶೇನ್ ಗೆ 15 ಸದಸ್ಯರ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಬಿಗ್-ಹಿಟ್ಟಿಂಗ್ ಮಧ್ಯಮ ಕ್ರಮಾಂಕದ ಬ್ಯಾಟರ್ ಟಿಮ್ ಡೇವಿಡ್ ಕೂಡ ಪಟ್ಟಿಯಲ್ಲಿ ಸ್ಥಾನವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.

ಆಸ್ಟ್ರೇಲಿಯ ಈ ಹಿಂದೆ ಪ್ರಕಟಿಸಿದ್ದ 18 ಸದಸ್ಯರ ಪ್ರಾಥಮಿಕ ತಂಡದಲ್ಲಿದ್ದ ಆಲ್ರೌಂಡರ್ ಆ್ಯರೋನ್ ಹಾರ್ಡಿ, ವೇಗಿ ನಥಾನ್ ಎಲ್ಲಿಸ್ ಹಾಗೂ ಯುವ ಸ್ಪಿನ್ನರ್ ತನ್ವೀರ್ ಸಂಘ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಬ್ಯಾಕ್-ಅಪ್ ವೇಗಿಯಾಗಿ ನಥಾನ್ ಎಲ್ಲಿಸ್ ಗಿಂತ ವೇಗಿ ಸೀನ್ ಅಬಾಟ್ ಗೆ ಆದ್ಯತೆ ನೀಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಸ್ಪಿನ್ನರ್ ಗಳಾದ ಆ್ಯಶ್ಟನ್ ಅಗರ್ ಮತ್ತು ಆಡಮ್ ಝಂಪಾಗೆ ಆಯ್ಕೆದಾರರಿಂದ ಅನುಮೋದನೆ ಸಿಕ್ಕಿದೆ.

ಅಲೆಕ್ಸ್ ಕ್ಯಾರಿ ಹಾಗೂ ಜೋಶ್ ಇಂಗ್ಲಿಸ್ ತಂಡದಲ್ಲಿರುವ ಇಬ್ಬರು ವಿಕೆಟ್ ಕೀಪರ್ ಬ್ಯಾಟರ್ಗಳಾಗಿದ್ದಾರೆ.

ಆಸ್ಟ್ರೇಲಿಯಾ ವಿಶ್ವಕಪ್ ತಂಡ:

ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಆ್ಯಶ್ಟನ್ ಅಗರ್, ಕ್ಯಾಮೆರಾನ್ ಗ್ರೀನ್, ಜೋಶ್ ಹೇಝಲ್ ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೋನಿಸ್, ಡೇವಿಡ್ ವಾರ್ನರ್, ಆ್ಯಡಮ್ ಝಾಂಪ, ಮಿಚೆಲ್ ಸ್ಟಾರ್ಕ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News