×
Ad

ಆಸ್ಟ್ರೇಲಿಯನ್ ಓಪನ್ ; ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್ ಫೈನಲ್ ಗೆ ಲಗ್ಗೆ

Update: 2024-01-22 21:28 IST

ರೋಹನ್ ಬೋಪಣ್ಣ , ಮ್ಯಾಥ್ಯೂ ಎಬ್ಡೆನ್ | Photo: NDTV 

ಮೆಲ್ಬರ್ನ್: ಭಾರತದ ಹಿರಿಯ ಟೆನಿಸ್ ಪಟು ರೋಹನ್ ಬೋಪಣ್ಣ ಹಾಗೂ ಅವರ ಆಸ್ಟ್ರೇಲಿಯದ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಆಸ್ಟ್ರೇಲಿಯನ್ ಓಪನ್ ನಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.

ಎರಡನೇ ಶ್ರೇಯಾಂಕದ ಬೋಪಣ್ಣ-ಎಬ್ಡೆನ್ ನೆದರ್ಲ್ಯಾಂಡ್ಸ್ನ ವೆಸ್ಲೆ ಕೂಲ್ಹಾಫ್ ಹಾಗೂ ಕ್ರೊಯೇಶಿಯದ ನಿಕೊಲಾ ಮೆಕ್ಟಿಕ್ರನ್ನು 7-6, 7-6 ಸೆಟ್ಗಳಿಂದ ರೋಚಕವಾಗಿ ಮಣಿಸಿದರು.

ತನ್ನ ಬಲಿಷ್ಠ ಸರ್ವಿಸ್ ಗೇಮ್ ಗೆ ಖ್ಯಾತಿ ಪಡೆದಿರುವ 43ರ ಹರೆಯದ ಬೋಪಣ್ಣ ಆರಂಭದಲ್ಲಿ ಹಿನ್ನಡೆ ಕಂಡರು. 14ನೇ ಶ್ರೇಯಾಂಕದ ವೆಸ್ಲೆ ಹಾಗೂ ನಿಕೊಲಾ ಆರಂಭಿಕ ಮುನ್ನಡೆ ಪಡೆದರು.ಆದಾಗ್ಯೂ ಭಾರತದ ಹಿರಿಯ ಆಟಗಾರ ಬೋಪಣ್ಣ ಮರು ಹೋರಾಟ ನೀಡಿದರು. ಮೊದಲ ಸೆಟ್ ನ 7ನೇ ಗೇಮ್ನಲ್ಲಿ ಬೋಪಣ್ಣ ಹಾಗೂ ಎಬ್ಡೆನ್ ಎದುರಾಳಿಯ ಅನಗತ್ಯ ತಪ್ಪುಗಳ ಲಾಭ ಪಡೆದರು. ಈ ಮೂಲಕ ಮೊದಲ ಸೆಟನ್ನು ಗೆದ್ದುಕೊಂಡರು.

ಎರಡನೇ ಸೆಟ್ ನಲ್ಲೂ ಬೋಪಣ್ಣ ತನ್ನ ಆರಂಭಿಕ ಸರ್ವಿಸ್ ಗೇಮ್ ಕಳೆದುಕೊಂಡರು. ಆಗ ಬೋಪಣ್ಣ ಹಾಗೂ ಎಬ್ಡೆನ್ ಪ್ರತಿ ಹೋರಾಟ ನೀಡಿದರು. ಪಂದ್ಯದ ಮೇಲೆ ಹಿಡಿತ ಸಾಧಿಸಿ ಜಯಶಾಲಿಯಾದರು.

ಬೋಪಣ್ಣ ಹಾಗೂ ಎಬ್ಡೆನ್ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿರುವ ಗರಿಷ್ಠ ಶ್ರೇಯಾಂಕದ ಜೋಡಿಯಾಗಿದ್ದಾರೆ. ಈ ಜೋಡಿ ಕ್ವಾರ್ಟರ್ ಫೈನಲ್ ನಲ್ಲಿ ಅರ್ಜೆಂಟೀನದ ಮ್ಯಾಕ್ಸಿಮೊ ಗೊಂಝಾಲೆಝ್ ಹಾಗೂ ಆ್ಯಂಡ್ರೆಸ್ ಮೊಲ್ಟೆನಿ ಅವರನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News