×
Ad

ಸಿಎಸ್‌ಕೆ ಪರ ಚೊಚ್ಚಲ ಪಂದ್ಯ ಆಡಿದ ಕಿರಿಯ ಆಟಗಾರ ಆಯುಷ್ ಮ್ಹಾತ್ರೆ

Update: 2025-04-20 23:06 IST

Photo : X

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡವು 17ರ ಹರೆಯದ ಆಯುಷ್ ಮ್ಹಾತ್ರೆಗೆ ಚೊಚ್ಚಲ ಪಂದ್ಯ ಆಡುವ ಅವಕಾಶ ನೀಡಿದೆ. ಆಯುಷ್ ಅವರು ಐಪಿಎಲ್ ಚರಿತ್ರೆಯಲ್ಲಿ ಸಿಎಸ್ಕೆ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರನಾಗಿದ್ದಾರೆ.

ಮುಂಬೈ ಮೂಲದ ಬ್ಯಾಟರ್ ಆಯುಷ್ ಗಾಯಗೊಂಡಿರುವ ಋತುರಾಜ್ ಗಾಯಕ್ವಾಡ್ ಬದಲಿಗೆ ತಂಡ ಸೇರಿದ್ದು, ರಾಹುಲ್ ತ್ರಿಪಾಠಿ ಬದಲಿಗೆ ಆಡಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಆಯುಷ್ ಕೇವಲ 15 ಎಸೆತಗಳಲ್ಲಿ 4 ಬೌಂಡರಿ,2 ಸಿಕ್ಸರ್ ಸಹಿತ 32 ರನ್ ಸಿಡಿಸಿ ಗಮನ ಸೆಳೆದರು.

2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಮ್ಹಾತ್ರೆ ಅವರನ್ನು ಯಾರೂ ಖರೀದಿಸಿರಲಿಲ್ಲ. ಚೆನ್ನೈನಲ್ಲಿ ನಡೆದಿದ್ದ ಟ್ರಯಲ್ಸ್ ವೇಳೆ ಸಿಎಸ್ಕೆ ಗಮನಸೆಳೆದು 30 ಲಕ್ಷ ರೂ.ಗೆ ಒಪ್ಪಂದಕ್ಕೆ ಸಹಿ ಹಾಕಿದರು.

ಆಯುಷ್ ಮುಂಬೈ ದೇಶೀಯ ಕ್ರಿಕೆಟ್ನ ಬಲಗೈ ಬ್ಯಾಟರ್ ಆಗಿದ್ದು, ಈಗ ಅವರು 17 ವರ್ಷ, 278 ದಿನಗಳಲ್ಲಿ ಸಿಎಸ್ಕೆಯ ಹಳದಿ ಜರ್ಸಿ ಧರಿಸಿದ್ದಾರೆ. ವಿಜಯ್ ಹಝಾರೆ ಟ್ರೋಫಿಯಲ್ಲಿ 458 ರನ್ ಹಾಗೂ ರಣಜಿಯಲ್ಲಿ 3 ಶತಕಗಳ ಸಹಿತ 471 ರನ್ ಗಳಿಸಿದ್ದಾರೆ.

ಐಪಿಎಲ್ನಲ್ಲಿ ಸಿಎಸ್ಕೆ ಪ್ರತಿನಿಧಿಸಿದ ಯುವ ಆಟಗಾರರು

17 ವರ್ಷ, 278 ದಿನಗಳು-ಆಯುಷ್ ಮ್ಹಾತ್ರೆ, ಮುಂಬೈ ವಿರುದ್ಧ 2025

18 ವರ್ಷ, 139 ದಿನಗಳು-ಅಭಿನವ್ ಮುಕುಂದ್, ರಾಜಸ್ಥಾನ ವಿರುದ್ಧ 2008

19 ವರ್ಷ, 123 ದಿನಗಳು-ಅನಿಕಿತ್ ರಾಜ್ಪೂತ್, ಮುಂಬೈ ವಿರುದ್ಧ,2013

19 ವರ್ಷ, 148 ದಿನಗಳು-ಮಥೀಶ ಪಥಿರನ, ಗುಜರಾತ್ ವಿರುದ್ಧ 2022

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News