×
Ad

ಬಾಬರ್ ಅಝಮ್‌ ಗೆ ಐಸಿಸಿ ಟಿ20 ವರ್ಷದ ತಂಡದ ಸದಸ್ಯ ಕ್ಯಾಪ್ ಪ್ರದಾನ

Update: 2025-02-18 21:30 IST

ಬಾಬರ್ ಅಝಮ್‌ | PC : NDTV 

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಆರಂಭಕ್ಕೆ ಒಂದು ದಿನ ಮುನ್ನ, ಪಾಕಿಸ್ತಾನದ ಬ್ಯಾಟರ್ ಬಾಬರ್ ಅಝಮ್‌ ಗೆ ಐಸಿಸಿ ಪುರುಷರ ಟಿ20ಐ 2024ರ ತಂಡ ಕ್ಯಾಪ್ ನೀಡಿ ಗೌರವಿಸಲಾಗಿದೆ.

ಟಿ20 ಪಂದ್ಯಗಳಲ್ಲಿ ನೀಡಿರುವ ಉತ್ತಮ ನಿರ್ವಹಣೆಗಾಗಿ 31 ವರ್ಷದ ಬಾಬರ್‌ರನ್ನು ಪ್ರತಿಷ್ಠಿತ ತಂಡಕ್ಕೆ ಕಳೆದ ತಿಂಗಳು ಸೇರಿಸಲಾಗಿತ್ತು. ಕ್ಯಾಪನ್ನು ಬಾಬರ್ ಸ್ವೀಕರಿಸುವುದನ್ನು ತೋರಿಸುವ ವೀಡಿಯೊವೊಂದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.

‘‘ಐಸಿಸಿ ಟಿ20ಐ 2024ರ ವರ್ಷದ ತಂಡದ ಸದಸ್ಯ ಕ್ಯಾಪ್ ಬಾಬರ್ ಅಝಮ್‌ ಗೆ ಪರಿಪೂರ್ಣವಾಗಿ ಹೊಂದುತ್ತದೆ’’ ಎಂದು ಈ ವೀಡಿಯೊಗೆ ನೀಡಿರುವ ಶೀರ್ಷಿಕೆಯಲ್ಲಿ ಐಸಿಸಿ ಹೇಳಿದೆ.

2024ರಲ್ಲಿ ಬಾಬರ್ 24 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡಿ 738 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಆರು ಅರ್ಧ ಶತಕಗಳಿವೆ. ಸ್ಥಿರ ನಿರ್ವಹಣೆ ಮತ್ತು ಸೊಗಸಾದ ಸ್ಟ್ರೋಕ್ ಆಟಕ್ಕೆ ಹೆಸರುವಾಸಿಯಾಗಿರುವ ಬಾಬರ್, ವರ್ಷವಿಡೀ ಪಾಕಿಸ್ತಾನದ ಬ್ಯಾಟಿಂಗ್ ಸರದಿಯ ಬೆನ್ನೆಲುಬಾಗಿದ್ದರು.

ಅವರು ನ್ಯೂಝಿಲ್ಯಾಂಡ್ ವಿರುದ್ಧದ ಮೂರು ನಿರಂತರ ಅರ್ಧ ಶತಕಗಳೊಂದಿಗೆ 2024ನೇ ವರ್ಷವನ್ನು ಆರಂಭಿಸಿದರು ಹಾಗೂ ಒತ್ತಡದಲ್ಲಿ ಉತ್ತಮ ನಿರ್ವಹಣೆ ನೀಡಿದರು. ಆ ಮೂಲಕ, ವಿಶ್ವದ ಅತ್ಯುತ್ತಮ ಟಿ20 ಬ್ಯಾಟರ್‌ಗಳ ಪೈಕಿ ಒಬ್ಬರೆಂಬ ಹೆಗ್ಗಳಿಕೆಯನ್ನು ಪಡೆದರು.

ಬುಧವಾರ ಕರಾಚಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನವು ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಟಿ20 ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಬಾಬರ್ ಏಕದಿನ ಪಂದ್ಯಗಳಲ್ಲೂ ಉತ್ತಮ ನಿರ್ವಹಣೆ ನೀಡಲು ಉತ್ಸುಕರಾಗಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News