×
Ad

‘‘ಕ್ರಿಕೆಟ್ ಸಲಕರಣೆಯ ದುರ್ಬಳಕೆ’’ಗಾಗಿ ಬಾಬರ್ ಅಝಮ್‌ ಗೆ ದಂಡ

Update: 2025-11-18 22:30 IST

ಬಾಬರ್ ಅಝಮ್‌ | Photo Credit : PTI 

ದುಬೈ, ನ. 18: ‘‘ಕ್ರಿಕೆಟ್ ಸಲಕರಣೆಯ ದುರ್ಬಳಕೆ’’ಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಬಾಬರ್ ಅಝಮ್‌ ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ದಂಡ ವಿಧಿಸಿದೆ.

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅವರು ಫಾರ್ಮ್‌ಗೆ ಮರಳಿದ್ದರು. ಬಳಿಕ, ರವಿವಾರ ನಡೆದ ಮೂರನೇ ಪಂದ್ಯದಲ್ಲಿ 34 ರನ್‌ಗೆ ಔಟಾಗಿದ್ದರು. ಇದರಿಂದ ನಿರಾಶರಾದ ಅವರು ಬ್ಯಾಟ್‌ನಿಂದ ವಿಕೆಟ್‌ಗಳಿಗೆ ಬಡಿದಿದ್ದರು.

ಹಾಗಾಗಿ, 31 ವರ್ಷದ ಆಟಗಾರ ಬಾಬರ್ ಐಸಿಸಿ ನೀತಿ ಸಂಹಿತೆಯ 2.2 ವಿಧಿಯನ್ನು ಉಲ್ಲಂಘಿಸಿದ್ದಾರೆ. ಅವರು ಒಂದನೇ ಹಂತದ ಉಲ್ಲಂಘನೆ ಮಾಡಿದ್ದಾರೆ ಎಂಬುದಾಗಿ ಮೈದಾನದ ಅಂಪೈರ್‌ ಗಳಾದ ಅಲೆಕ್ಸ್ ವಾರ್ಫ್ ಮತ್ತು ರಶೀದ್ ರಿಯಾಝ್ ಹಾಗೂ ತೃತೀಯ ಅಂಪೈರ್ ಶರ್ಫುದ್ದೌಲ ಇಬ್ನಿ ಶಾಹಿದ್ ಮತ್ತು ನಾಲ್ಕನೇ ಅಂಪೈರ್ ಫೈಸಲ್ ಅಫ್ರಿದಿ ನಿರ್ಧರಿಸಿದ್ದಾರೆ.

ಒಂದನೇ ಹಂತದ ಉಲ್ಲಂಘನೆಗೆ ಗರಿಷ್ಠ ದಂಡವಾಗಿ ಆಟಗಾರನ ಪಂದ್ಯಶುಲ್ಕದ 50 ಶೇಕಡ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಜೊತೆಗೆ ಅವರಿಗೆ ಒಂದು ಡೀಮೆರಿಟ್ ಅಂಕವನ್ನೂ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News