ಏಶ್ಯಕಪ್ ಟೂರ್ನಿಯಿಂದ ಬಾಂಗ್ಲಾದೇಶದ ಲಿಟನ್ ದಾಸ್ ಔಟ್
Photo : .instagram/litton_kumer_das
ಹೊಸದಿಲ್ಲಿ: ಬಾಂಗ್ಲಾದೇಶದ ವಿಕೆಟ್ಕೀಪರ್-ಬ್ಯಾಟರ್ ಲಿಟನ್ ದಾಸ್ ೨೦೨೩ರ ಏಶ್ಯಕಪ್ನಿಂದ ಹೊರಗುಳಿದಿದ್ದಾರೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಬಾಂಗ್ಲಾದೇಶ ಆಡಲಿರುವ ಟೂರ್ನಮೆಂಟ್ನ ಮೊದಲ ಪಂದ್ಯದಲ್ಲಿ ಭಾಗವಹಿಸಲು ಶ್ರೀಲಂಕಾಕ್ಕೆ ಪ್ರಯಾಣಿಸದಂತೆ ತಡೆದಿರುವ ವೈರಲ್ ಜ್ವರದಿಂದ ದಾಸ್ ಇನ್ನೂ ಚೇತರಿಸಿಕೊಂಡಿಲ್ಲ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ೩೦ರ ಹರೆಯದ ವಿಕೆಟ್ಕೀಪರ್-ಬ್ಯಾಟರ್ ಅನಮುಲ್ ಹಕ್ರನ್ನು ಲಿಟನ್ ದಾಸ್ ಬದಲಿಗೆ ನೇಮಿಸಿದೆ. ಹಕ್ ತನ್ನ ದೇಶದ ಪರ ೪೪ ಏಕದಿನ ಅಂತರ್ರಾಷ್ಟ್ರೀಯ ಪಂದ್ಯಗಳನ್ನಾಡಿದ್ದು ೧೨೦೦ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಹಕ್ ದೇಶೀಯ ಕ್ರಿಕೆಟ್ನಲ್ಲಿ ರನ್ ಗಳಿಸಿದ್ದು, ಬಾಂಗ್ಲಾದೇಶ ಟೈಗರ್ಸ್ ಕಾರ್ಯಕ್ರಮದಲ್ಲಿ ಅವರ ಮೇಲೆ ನಿಗಾವಹಿಸುವುದನ್ನು ಮುಂದುವರಿಸಲಿದ್ದೇವೆ. ಅವರು ಯಾವಾಗಲೂ ನಮ್ಮ ಪರಿಗಣನೆಯಲ್ಲಿದ್ದಾರೆ ಎಂದು ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಮಿನ್ಹಜುಲ್ ಹೇಳಿದ್ದಾರೆ.