×
Ad

ಜಪಾನ್ ಓಪನ್ ಟೆನಿಸ್ ಟೂರ್ನಿ : ಬೋಪಣ್ಣ-ಯುಝುಕಿ ಸೆಮಿ ಫೈನಲ್‌ಗೆ

Update: 2025-09-26 22:29 IST

PC : ATP

ಟೋಕಿಯೊ, ಸೆ.26: ಜಪಾನಿನ ಟಕೆರು ಯುಝುಕಿ ಅವರೊಂದಿಗೆ ಡಬಲ್ಸ್ ಪಂದ್ಯವನ್ನಾಡಿದ ರೋಹನ್ ಬೋಪಣ್ಣ ಅವರು ಜಪಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಶುಕ್ರವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೈಲ್ಡ್‌ಕಾರ್ಡ್ ಪಡೆದಿದ್ದ ಬೋಪಣ್ಣ ಹಾಗೂ ಯುಝುಕಿ ಜೋಡಿ ಅರ್ಜೆಂಟೀನದ ಮ್ಯಾಕ್ಸಿಮೊ ಗೊಂಝಾಲೆಝ್ ಹಾಗೂ ಆಂಡರ್ಸ್ ಮೊಲ್‌ಟೆನಿ ಅವರನ್ನು 7-6(5), 7-6(4) ಸೆಟ್‌ಗಳ ಅಂತರದಿಂದ ಮಣಿಸಿತು.

ಬೋಪಣ್ಣ ಹಾಗೂ ಯುಝುಕಿ ಮುಂದಿನ ಸುತ್ತಿನಲ್ಲಿ ಅಮೆರಿಕದ ಅಗ್ರ ಶ್ರೇಯಾಂಕದ ಜೋಡಿ ಕ್ರಿಸ್ಟಿಯನ್ ಹ್ಯಾರಿಸನ್ ಹಾಗೂ ಎವನ್ ಕಿಂಗ್ ಅಥವಾ ಸ್ಥಳೀಯ ಆಟಗಾರರಾದ ಕೈಟೊ ಯುಸುಗಿ ಹಾಗೂ ಸೆಟಾ ವಟನಬೆ ಅವರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News