ಎಂಸಿಸಿ ಮ್ಯೂಸಿಯಮ್ ಗೆ ಶೂಗಳನ್ನು ಕೊಡುಗೆ ನೀಡಿದ ಬುಮ್ರಾ
Update: 2025-07-12 22:07 IST
ಜಸ್‌ಪ್ರಿತ್ ಬುಮ್ರಾ | PC : X
ಲಾರ್ಡ್ಸ್: ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಗೊಂಚಲನ್ನು ಪಡೆದ ನಂತರ ಭಾರತದ ಸ್ಟಾರ್ ಬೌಲರ್ ಜಸ್‌ಪ್ರಿತ್ ಬುಮ್ರಾ ತನ್ನ ಶೂಗಳನ್ನು ಎಂಸಿಸಿ ಮ್ಯೂಸಿಯಮ್ ಗೆ ಕೊಡುಗೆಯಾಗಿ ನೀಡಿದರು.
ಕ್ರಿಕೆಟ್‌ನ ಹಲವು ಲೆಜೆಂಡ್‌ಗಳು ಬಳಸಿರುವ ಹಲವಾರು ಕ್ರಿಕೆಟ್ ಕಿಟ್ ಗಳನ್ನು ಒಳಗೊಂಡಿರುವ ಮ್ಯೂಸಿಯಮ್ ನಲ್ಲಿ ಈಗ ಬುಮ್ರಾರ ಶೂಗಳನ್ನು ಇಡಲಾಗಿದೆ.
2ನೇ ದಿನದಾಟದಂತ್ಯಕ್ಕೆ ಪಂದ್ಯದ ಚೆಂಡನ್ನು ತನ್ನಲ್ಲೇ ಇರಿಸಿಕೊಂಡ ಬುಮ್ರಾ, ಹಸ್ತಾಕ್ಷರವಿರುವ ತನ್ನ ಶೂಗಳನ್ನು ಮ್ಯೂಸಿಯಮ್ ಗೆ ದಾನ ನೀಡಿದರು. ಬುಮ್ರಾ ವಿದೇಶಿ ನೆಲದಲ್ಲಿ ತನ್ನ 13ನೇ ಐದು ವಿಕೆಟ್ ಗೊಂಚಲು ಪಡೆದರು. ಇದು ವಿದೇಶದಲ್ಲಿ ಭಾರತೀಯ ಬೌಲರ್ ನ ಶ್ರೇಷ್ಠ ಸಾಧನೆಯಾಗಿದೆ.