×
Ad

ಕಪಿಲ್ ದೇವ್ ದಾಖಲೆಯನ್ನು ಮುರಿದ ಬುಮ್ರಾ: ವಿದೇಶಗಳಲ್ಲಿ ಗರಿಷ್ಠ 5 ವಿಕೆಟ್ ಗೊಂಚಲು

Update: 2025-07-11 21:50 IST

ಕಪಿಲ್ ದೇವ್, ಬುಮ್ರಾ | PC : NDTV 

ಲಂಡನ್: ಭಾರತೀಯ ವೇಗಿ ಜಸ್‌ಪ್ರಿತ್ ಬುಮ್ರಾ ಇನ್ನೊಂದು ಐದು ವಿಕೆಟ್‌ ಗಳ ಗೊಂಚಲನ್ನು ಪಡೆದಿದ್ದಾರೆ. ಲಂಡನ್‌ ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಆ್ಯಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯ 3ನೇ ಪಂದ್ಯದ 2ನೇ ದಿನವಾದ ಶುಕ್ರವಾರ ಅವರು 5 ವಿಕೆಟ್‌ ಗಳ ಗೊಂಚಲನ್ನು ಪೂರ್ತಿಗೊಳಿಸಿದರು.

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಬುಮ್ರಾರ 15ನೇ ಐದು ವಿಕೆಟ್ ಗೊಂಚಲಾಗಿದೆ. ಈ ಪೈಕಿ 13ನ್ನು ಅವರು ವಿದೇಶಗಳಲ್ಲಿ ಕೇವಲ 35 ಪಂದ್ಯಗಳಲ್ಲಿ ದಾಖಲಿಸಿದ್ದಾರೆ. ಆ ಮೂಲಕ ಅವರು ಕ್ರಿಕೆಟ್ ದಂತಕತೆ ಕಪಿಲ್ ದೇವ್‌ರ ದಾಖಲೆಯನ್ನು ಮುರಿದಿದ್ದಾರೆ. ಕಪಿಲ್ ದೇವ್ ವಿದೇಶಗಳಲ್ಲಿ 66 ಪಂದ್ಯಗಳಲ್ಲಿ 12 ಐದು ವಿಕೆಟ್‌ ಗಳ ಗೊಂಚಲನ್ನು ಪಡೆದಿದ್ದಾರೆ.

ಮೊದಲ ದಿನವಾದ ಗುರುವಾರ ಮೊದಲ ಅವಧಿಯ ಆಟದಲ್ಲಿ ಹೊಸ ಚೆಂಡಿನಿಂದ ವಿಕೆಟ್ ಪಡೆಯಲು ವಿಫಲವಾದರೂ, ಮೂರನೇ ಅವಧಿಯ ಆಟದಲ್ಲಿ ಹ್ಯಾರಿ ಬ್ರೂಕ್‌ ರ ವಿಕೆಟ್ ಪಡೆಯುವಲ್ಲಿ ಬುಮ್ರಾ ಯಶಸ್ವಿಯಾಗಿದ್ದರು.

ಶುಕ್ರವಾರ 2ನೇ ದಿನದ ಮೊದಲ ಅವಧಿಯ ಆಟದ ವೇಳೆ, ಹೊಸ ಚೆಂಡಿನಲ್ಲಿ 3 ವಿಕೆಟ್‌ ಗಳನ್ನು ಪಡೆಯುವಲ್ಲಿ ಅವರು ಯಶಸ್ವಿಯಾದರು. ಅವರು ನಾಯಕ ಬೆನ್ ಸ್ಟೋಕ್ಸ್, ಶತಕವೀರ ಜೋ ರೂಟ್ ಮತ್ತು ಕ್ರಿಸ್ ವೋಕ್ಸ್‌ ರನ್ನು ಪೆವಿಲಿಯನ್‌ ಗೆ ಕಳುಹಿಸಿದರು.

ಬಳಿಕ, 2ನೇ ಅವಧಿಯಲ್ಲಿ ಅವರು ಜೋಫ್ರಾ ಆರ್ಚರ್ ವಿಕೆಟನ್ನು ಉರುಳಿಸಿದರು. ಆ ಮೂಲಕ ತನ್ನ 5ನೇ ವಿಕೆಟ್ ಪಡೆದರು.

► ವಿದೇಶಗಳಲ್ಲಿ ಗರಿಷ್ಠ 5 ವಿಕೆಟ್ ಗೊಂಚಲು ಪಡೆದ ಭಾರತೀಯ ಬೌಲರ್‌ಗಳು

ಜಸ್‌ಪ್ರಿತ್ ಬುಮ್ರಾ- 13 (35 ಪಂದ್ಯಗಳು)

ಕಪಿಲ್ ದೇವ್- 12 (66 ಪಂದ್ಯಗಳು)

ಅನಿಲ್ ಕುಂಬ್ಳೆ- 10 (69 ಪಂದ್ಯಗಳು)

ಇಶಾಂತ್ ಶರ್ಮಾ- 9 (62 ಪಂದ್ಯಗಳು)

ಆರ್. ಅಶ್ವಿನ್- 8 (40 ಪಂದ್ಯಗಳು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News