×
Ad

ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಭಾರತಕ್ಕೆ ಬೇಕು 252 ರನ್‌

Update: 2025-03-09 18:09 IST

PC : PTI 

ದುಬೈ: ಇಲ್ಲಿನ ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ರವಿವಾರ ಭಾರತ ನ್ಯೂಝಿಲ್ಯಾಂಡ್ ನಡುವೆ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವು ಭಾರತಕ್ಕೆ 252 ರನ್ ಗಳ ಗುರಿನೀಡಿದೆ.

ಭಾರತದ ಸ್ಪಿನ್ನರ್‌ಗಳ ಶಿಸ್ತುಬದ್ಧ ದಾಳಿಯಿಂದಾಗಿ ನ್ಯೂಝಿಲ್ಯಾಂಡ್ ತಂಡವು 50 ಓವರ್‌ಗಳಲ್ಲಿ 251 ರನ್‌ ಪೇರಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೀವಿಸ್ ಪಡೆಗೆ ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಉತ್ತಮ ಆರಂಭ ನೀಡಿದರು. ರಚಿನ್ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. 29 ಎಸೆತಗಳಲ್ಲಿ 37 ರನ್‌ ಗಳಿಸಿದ್ದಾಗ ಕುಲದೀಪ್ ಯಾದವ್ ಎಸೆತದಲ್ಲಿ ವಿಕೆಟ್‌ ಒಪ್ಪಿಸಿ ಅವರು ನಿರ್ಗಮಿಸಿದರು.

ನಂತರ ಬಂದ ಕೇನ್ ವಿಲಿಯಮ್ಸನ್ ಅವರನ್ನೂ ಕುಲದೀಪ್ ಪೆವಿಲಿಯನ್‌ ಗೆ ಕಳುಹಿಸಿದರು. ನ್ಯೂಝಿಲ್ಯಾಂಡ್ ಪರ ಡೇರಿಲ್ ಮಿಚೆಲ್ ಅವರು 101 ಎಸೆತಗಳಲ್ಲಿ 63 ರನ್ ಗಳಿಸಿದರು. ಗ್ಲೆನ್ ಫಿಲಿಪ್ ರಕ್ಷಣಾತ್ಮಕ ಆಟವಾಡಿ 34 ರನ್ ಬಾರಿಸಿದರು. ಮಿಚೆಲ್ ಬ್ರೇಸ್‌ವೆಲ್ ಅರ್ಧ ಶತಕ ಗಳಿಸಿದರು.

ಭಾರತದ ಪರ ವರುಣ್ ಚಕ್ರವರ್ತಿ ಹಾಗೂ ಕುಲದೀಪ್ ಯಾದವ್ ತಲಾ 2, ಶಮಿ ಹಾಗೂ ಜಡೇಜಾ 2 ವಿಕೆಟ್ ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News