×
Ad

ಚಾಂಪಿಯನ್ಸ್ ಟ್ರೋಫಿ ಟೂರ್ನಿ | ಭಾರತ ಕ್ರಿಕೆಟ್ ತಂಡಕ್ಕೆ ಮೂರನೇ ಪ್ರಶಸ್ತಿ ಕನಸು

Update: 2025-02-16 21:22 IST

PC : PTI

ಹೊಸದಿಲ್ಲಿ: ದುಬೈನಲ್ಲಿ ಗುರುವಾರ ಬಾಂಗ್ಲಾದೇಶ ತಂಡವನ್ನು ಎದುರಿಸುವ ಮೂಲಕ 2025ರ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿರುವ ಭಾರತ ಕ್ರಿಕೆಟ್ ತಂಡವು ಮೂರನೇ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.

ಭಾರತ ತಂಡವು 2002ರಲ್ಲಿ(ಶ್ರೀಲಂಕಾ ಜಂಟಿ-ವಿನ್ನರ್)ಹಾಗೂ 2013ರ ಆವೃತ್ತಿಯ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿತ್ತು. ಆದರೆ 2017ರಲ್ಲಿ ಫೈನಲ್‌ ಗೆ ತಲುಪಿದ್ದರೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೋಲನುಭವಿಸಿ ರನ್ನರ್ಸ್ ಅಪ್‌ ಗೆ ತೃಪ್ತಿಪಟ್ಟಿತ್ತು.

ಭಾರತದ ಎಡಗೈ ಆರಂಭಿಕ ಬ್ಯಾಟರ್ ಶಿಖರ್ ಧವನ್ 2013 ಹಾಗೂ 2017ರ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬ್ಯಾಟಿಂಗ್‌ ನಲ್ಲಿ ಕ್ರಮವಾಗಿ 363 ಹಾಗೂ 338 ರನ್ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದರು.

ಆಸ್ಟ್ರೇಲಿಯ ಹಾಗೂ ಭಾರತ ತಂಡಗಳು ಮಾತ್ರ ತಲಾ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿದ ಸಾಧನೆ ಮಾಡಿವೆ.

►  ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಸಮಗ್ರ ದಾಖಲೆ(1998-2017)

ಆಡಿರುವ ಪಂದ್ಯಗಳು: 29

ಗೆದ್ದ ಪಂದ್ಯಗಳು: 18

ಸೋತ ಪಂದ್ಯಗಳು: 8

ಫಲಿತಾಂಶ ರಹಿತ: 3

► ಹಿಂದಿನ 5 ಪಂದ್ಯಗಳ ಫಲಿತಾಂಶಗಳು:

3ರಲ್ಲಿ ಜಯ, 2ರಲ್ಲಿ ಸೋಲು

ಪ್ರತಿಯೊಂದು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಸಾಧನೆ

► ವರ್ಷ ಫಲಿತಾಂಶ ಗರಿಷ್ಠ ರನ್ ಸ್ಕೋರರ್ ವಿಕೆಟ್

1998 ಸೆಮಿ ಫೈನಲ್ ಸಚಿನ್ ತೆಂಡುಲ್ಕರ್(149) ಸಚಿನ್ ತೆಂಡುಲ್ಕರ್(6)

2000 ರನ್ನರ್ಸ್ ಅಪ್ ಸೌರವ್ ಗಂಗುಲಿ(348) ವೆಂಕಟೇಶ್ ಪ್ರಸಾದ್(8)

2002 ವಿನ್ನರ್ ವೀರೇಂದ್ರ ಸೆಹ್ವಾಗ್(271) ಝಹೀರ್ ಖಾನ್(8)

2004 ಗ್ರೂಪ್ ಹಂತ ರಾಹುಲ್ ದ್ರಾವಿಡ್(97) ಇರ್ಫಾನ್ ಪಠಾಣ್ (5)

2006 ಗ್ರೂಪ್ ಹಂತ ರಾಹುಲ್ ದ್ರಾವಿಡ್(105) ಮುನಾಫ್ ಪಟೇಲ್(4)

2009 ಗ್ರೂಪ್ ಹಂತ ವಿರಾಟ್ ಕೊಹ್ಲಿ(95) ಆಶೀಶ್ ನೆಹ್ರಾ(8)

2013 ವಿನ್ನರ್ ಶಿಖರ್ ಧವನ್(363) ರವೀಂದ್ರ ಜಡೇಜ(12)

2017 ರನ್ನರ್ಸ್ ಅಪ್ ಶಿಖರ್ ಧವನ್(338) ಭುವನೇಶ್ವರ್ ಕುಮಾರ್(7)

► ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವೇಳಾಪಟ್ಟಿ

ಭಾರತ-ಬಾಂಗ್ಲಾದೇಶ-ಫೆಬ್ರವರಿ 20-ದುಬೈ(ಮಧ್ಯಾಹ್ನ 2:30)

ಭಾರತ-ಪಾಕಿಸ್ತಾನ-ಫೆಬ್ರವರಿ 23-ದುಬೈ(ಮಧ್ಯಾಹ್ನ 2:30)

ಭಾರತ-ನ್ಯೂಝಿಲ್ಯಾಂಡ್-ಮಾರ್ಚ್ 2-ದುಬೈ(ಮಧ್ಯಾಹ್ನ 2:30)

► ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ

ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್(ಉಪ ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್(ವಿಕೆಟ್‌ಕೀಪರ್), ರಿಷಭ್ ಪಂತ್(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮುಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜ, ವರುಣ್ ಚಕ್ರವರ್ತಿ.

► ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ಸಂಪೂರ್ಣ ವೇಳಾಪಟ್ಟಿ

ಫೆ.19 ಪಾಕಿಸ್ತಾನ-ನ್ಯೂಝಿಲ್ಯಾಂಡ್ ಕರಾಚಿ ಮಧ್ಯಾಹ್ನ 2:30

ಫೆ.20 ಭಾರತ-ಬಾಂಗ್ಲಾದೇಶ ದುಬೈ ಮಧ್ಯಾಹ್ನ 2:30

ಫೆ.21 ಅಫ್ಘಾನಿಸ್ತಾನ-ದ.ಆಫ್ರಿಕಾ ಕರಾಚಿ ಮಧ್ಯಾಹ್ನ 2:30

ಫೆ.22 ಆಸ್ಟ್ರೇಲಿಯ-ಇಂಗ್ಲೆಂಡ್ ಲಾಹೋರ್ ಮಧ್ಯಾಹ್ನ 2:30

ಫೆ.23 ಭಾರತ-ಪಾಕಿಸ್ತಾನ ದುಬೈ ಮಧ್ಯಾಹ್ನ 2:30

ಫೆ.24 ಬಾಂಗ್ಲಾ-ನ್ಯೂಝಿಲ್ಯಾಂಡ್ ರಾವಲ್ಪಿಂಡಿ ಮಧ್ಯಾಹ್ನ 2:30

ಫೆ.25 ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ರಾವಲ್ಪಿಂಡಿ ಮಧ್ಯಾಹ್ನ 2:30

ಫೆ.26 ಅಫ್ಘಾನಿಸ್ತಾನ-ಇಂಗ್ಲೆಂಡ್ ಲಾಹೋರ್ ಮಧ್ಯಾಹ್ನ 2:30

ಫೆ.27 ಪಾಕಿಸ್ತಾನ-ಬಾಂಗ್ಲಾದೇಶ ರಾವಲ್ಪಿಂಡಿ ಮಧ್ಯಾಹ್ನ 2:30

ಫೆ.28 ಅಫ್ಘಾನಿಸ್ತಾನ-ಆಸ್ಟ್ರೇಲಿಯ ಲಾಹೋರ್ ಮಧ್ಯಾಹ್ನ 2:30

ಮಾ.1 ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ಕರಾಚಿ ಮಧ್ಯಾಹ್ನ 2:30

ಮಾ.2 ಭಾರತ-ನ್ಯೂಝಿಲ್ಯಾಂಡ್ ದುಬೈ ಮಧ್ಯಾಹ್ನ 2:30

ಮಾ.4 ಮೊದಲ ಸೆಮಿ ಫೈನಲ್ ದುಬೈ ಮಧ್ಯಾಹ್ನ 2:30

ಮಾ.5 ಎರಡನೇ ಸೆಮಿ ಫೈನಲ್ ಲಾಹೋರ್ ಮಧ್ಯಾಹ್ನ 2:30

ಮಾ.9 ಫೈನಲ್ ಲಾಹೋರ್/ದುಬೈ ಮಧ್ಯಾಹ್ನ 2:30

*‘ಎ’ ಗುಂಪು:

ಪಾಕಿಸ್ತಾನ, ಭಾರತ, ಬಾಂಗ್ಲಾದೇಶ, ನ್ಯೂಝಿಲ್ಯಾಂಡ್

‘ಬಿ’ ಗುಂಪು: ಆಸ್ಟ್ರೇಲಿಯ, ಅಫ್ಘಾನಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News