×
Ad

ಏಶ್ಯಕಪ್‌ನಿಂದ ಹೊರಗುಳಿದ ಪಾಕ್ ವೇಗಿ ನಸೀಂ ಶಾ, ಝಮಾನ್ ಖಾನ್‌ಗೆ ಅವಕಾಶ

Update: 2023-09-13 23:23 IST

Photo: twitter/iNaseemShah

ಕೊಲಂಬೊ : ಭಾರತ ವಿರುದ್ಧ ಏಶ್ಯಕಪ್ ಸೂಪರ್-4 ಪಂದ್ಯದ ಮೀಸಲು ದಿನದಾಟವಾದ ಸೋಮವಾರ ಭುಜನೋವಿಗೆ ಒಳಗಾಗಿದ್ದ ವೇಗದ ಬೌಲರ್ ನಸೀಂ ಶಾ ಅವರನ್ನು ಪಾಕ್ ತಂಡದಿಂದ ಹಿಂದೆ ಕರೆಸಲಾಗಿದ್ದು, ಅವರ ಬದಲಿಗೆ ಝಮಾನ್ ಖಾನ್‌ಗೆ ಅವಕಾಶ ನೀಡಲಾಗಿದೆ.

ಇನ್ನೊಂದು ತಿಂಗಳೊಳಗೆ ಆರಂಭವಾಗಲಿರುವ ಏಕದಿನ ವಿಶ್ವಕಪ್‌ನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ತಂಡವು ನಸೀಂ ಖಾನ್ ಮೇಲೆ ನಿರಂತರ ನಿಗಾವಹಿಸಲಿದೆ. ಝಮಾನ್ ಈಗಾಗಲೇ ಪಾಕಿಸ್ತಾನ ತಂಡದೊಂದಿಗಿದ್ದು, ಆ ತಂಡದೊಂದಿಗೆ ಅಭ್ಯಾಸ ನಡೆಸಲಾರಂಭಿಸಿದ್ದಾರೆ ಎಂದು ಪಿಸಿಬಿ ತಿಳಿಸಿದೆ.

ಈ ಹಂತದಲ್ಲಿ ನಸೀಂ ಅವರ ಗಾಯವು ವಿಶ್ವಕಪ್‌ನಲ್ಲಿ ಅವರ ಲಭ್ಯತೆಯ ಮೇಲೆ ಪರಿಣಾಮ ಬೀರುವುದನ್ನು ಪಾಕಿಸ್ತಾನ ಬಯಸುತ್ತಿಲ್ಲ ಎಂದು ಇಎಸ್‌ಪಿಎನ್‌ ಕ್ರಿಕ್‌ ಇನ್‌ಫೋ ತಿಳಿಸಿದೆ.

ರವಿವಾರ ಭಾರತ ವಿರುದ್ಧ ಸೂಪರ್-4 ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದ ಹಾರಿಸ್ ರವೂಫ್ ಮೀಸಲು ದಿನವಾದ ಸೋಮವಾರ ಮೈದಾನಕ್ಕೆ ಇಳಿದಿರಲಿಲ್ಲ. ರವೂಫ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪಿಸಿಬಿ ತಿಳಿಸಿದೆ.

ಈ ಇಬ್ಬರು ವೇಗದ ಬೌಲರ್‌ಗಳು ನಮಗೆ ಅತ್ಯಂತ ಮುಖ್ಯವಾಗಿದ್ದು ಅತ್ಯಂತ ಪ್ರಮುಖ ವಿಶ್ವಕಪ್‌ಗಿಂತ ಮೊದಲು ತಂಡದ ವೈದ್ಯಕೀಯ ತಂಡವು ಅವರಿಗೆ ಎಲ್ಲ ರೀತಿಯ ಕಾಳಜಿ ತೋರಲಿದೆ ಎಂದು ಟೀಮ್ ವೈದ್ಯರಾದ ಸೊಹೈಲ್ ಸಲೀಂ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News