×
Ad

ಚೆನ್ನೈ ಓಪನ್ | ಸತತ 2ನೇ ದಿನವೂ ಮಳೆ ಅಡ್ಡಿ

Update: 2025-10-28 22:39 IST

ಚೆನ್ನೈ, ಅ.28: ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಪ್ರಧಾನ ಸುತ್ತಿನ ಪಂದ್ಯವು ಸತತ ಎರಡನೇ ದಿನವೂ ಮಳೆಯಿಂದಾಗಿ ರದ್ದಾಗಿದೆ.

ಸುಮಾರು 3 ಶಕಗಳಿಂದ ಅಂತರ್ರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗಳನ್ನು ಆಯೋಜಿಸಿದ ಇತಿಹಾಸ ಹೊಂದಿರುವ ನಗರ ಎಂದೂ ಕಾಣದ ಪರಿಸ್ಥಿತಿ ಎದುರಿಸುತ್ತಿದೆ.

ಮಳೆಯಿಂದಾಗಿ ಸೋಮವಾರದ ಪಂದ್ಯಗಳು ರದ್ದಾಗಿರುವ ಹಿನ್ನೆಲೆಯಲ್ಲಿ ಆಯೋಜಕರು ಮಂಗಳವಾರ ಪಂದ್ಯದ ವೇಳಾಪಟ್ಟಿಯನ್ನು ಬದಲಿಸಿದ್ದರು.

ಡಬ್ಲ್ಯುಟಿಎ 250 ಟೂರ್ನಿಯಲ್ಲಿ ಮೊದಲ ಹಾಗೂ 2ನೇ ಸುತ್ತಿನ ಪಂದ್ಯಗಳು ವಾರದ ಮೊದಲ 4 ದಿನಗಳಲ್ಲಿ ನಡೆಯುತ್ತದೆ. ಆ ನಂತರ ಶುಕ್ರವಾರ ಕ್ವಾರ್ಟರ್ ಫೈನಲ್ ನಡೆಯಲಿದೆ. ವಾರಾಂತ್ಯದಲ್ಲಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News