×
Ad

ಚಿನ್ನಸ್ವಾಮಿ ಸ್ಟೇಡಿಯಮ್ ಸ್ಟ್ಯಾಂಡ್‌ಗಳಿಗೆ ಕರ್ನಾಟಕ ದಿಗ್ಗಜರ ಹೆಸರಿಡಲು ನಿರ್ಧಾರ : ಕೆ.ಎಲ್. ರಾಹುಲ್ ಸ್ವಾಗತ

Update: 2024-12-04 21:07 IST

ಕೆ.ಎಲ್. ರಾಹುಲ್ | PC : @ICC

ಹೊಸದಿಲ್ಲಿ : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಕರ್ನಾಟಕದ ಐಕಾನಿಕ್ ಕ್ರಿಕೆಟ್ ಲೆಜೆಂಡ್‌ಗಳ ಹೆಸರಿಡುವ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ತನ್ನ ತವರು ಮೈದಾನದಲ್ಲಿ ಇಂತಹ ಹೆಜ್ಜೆಗೆ ಮುಂದಾಗಿರುವುದನ್ನು ಕೆ.ಎಲ್. ರಾಹುಲ್ ಸ್ವಾಗತಿಸಿದ್ದಾರೆ. ಮುಂದೊಂದು ದಿನ ತನ್ನ ಹೆಸರು ಆ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದೇನೆ ಎಂದಿದ್ದಾರೆ.

ಪ್ರತಿಯೊಬ್ಬರು ಅದಕ್ಕಾಗಿ ಇಷ್ಟಪಡುತ್ತಾರೆ. ನಾನು ಸಾಕಷ್ಟು ರನ್ ಗಳಿಸಿದರೆ, ಜನರು ನನ್ನ ಹೆಸರನ್ನು ಈ ಸ್ಟ್ಯಾಂಡ್‌ಗೆ ಇಡುತ್ತಾರೆ. ಹೌದು ನಾನೀಗ ಅಂತಹ ಎತ್ತರಕ್ಕೆ ಬೆಳೆದಿಲ್ಲ ಎಂದು ಕನ್ನಡ, ತುಳು, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಲ್ಲ ರಾಹುಲ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಬಿ.ಎಸ್.ಚಂದ್ರಶೇಖರ್, ಇ.ಎ.ಎಸ್. ಪ್ರಸನ್ನ, ಜಿ.ಆರ್.ವಿಶ್ವನಾಥ್, ಸಯ್ಯದ್ ಕೀರ್ಮಾನಿ, ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್ ಹಾಗೂ ವೆಂಕಟೇಶ್ ಪ್ರಸಾದ್ ಹೆಸರುಗಳನ್ನು ಸ್ಟ್ಯಾಂಡ್‌ಗಳಿಗೆ ಹೆಸರಿಸಲು ನಿರ್ಧರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News