×
Ad

ಕ್ರಿಸ್ ಗೇಲ್ ದಾಖಲೆ ಪತನ; ವಿಂಡೀಸ್‌ ನ 2ನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡ ಪೊವೆಲ್

Update: 2025-07-27 20:21 IST

ರೋವ್‌ಮನ್ ಪೊವೆಲ್ | PC : X 

ಸೇಂಟ್ ಕಿಟ್ಸ್, ಜು. 27: ಟಿ20 ಅಂತರ್‌ರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ವೆಸ್ಟ್‌ಇಂಡೀಸ್‌ ನ ಎರಡನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿರುವ ರೋವ್‌ಮನ್ ಪೊವೆಲ್ ಅವರು ಲೆಜೆಂಡರಿ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದರು.

ಆಸ್ಟ್ರೇಲಿಯ ತಂಡದ ವಿರುದ್ಧ ವಾರ್ನರ್ ಪಾರ್ಕ್‌ ನಲ್ಲಿ ಶನಿವಾರ ನಡೆದಿದ್ದ 4ನೇ ಟಿ20 ಪಂದ್ಯದ ವೇಳೆ ಪೊವೆಲ್ ಈ ಮೈಲಿಗಲ್ಲು ತಲುಪಿದ್ದಾರೆ.

ಮೊದಲ 3 ಪಂದ್ಯಗಳಲ್ಲಿ 1, 12 ಹಾಗೂ 9 ರನ್ ಗಳಿಸಿದ ನಂತರ ಪೊವೆಲ್ ಅವರು 4ನೇ ಪಂದ್ಯದಲ್ಲಿ ಸ್ವಲ್ಪ ಲಯ ಕಂಡುಕೊಂಡಿದ್ದು, 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್‌ ಗಳ ಸಹಿತ 28 ರನ್ ಗಳಿಸಿದರು. ಹೆಚ್ಚು ಹೊತ್ತು ಕ್ರೀಸ್‌ ನಲ್ಲಿ ನಿಲ್ಲದೆ ಇದ್ದರೂ ತನ್ನ ಪವರ್ ಹಿಟ್ಟಿಂಗ್ ಸಾಮರ್ಥ್ಯದಿಂದ ಗಮನ ಸೆಳೆದಿದ್ದಾರೆ.

ಈ ಇನಿಂಗ್ಸ್‌ನ ಮೂಲಕ ಪೊವೆಲ್ ಅವರು ಇದೀಗ 99 ಟಿ20 ಪಂದ್ಯಗಳಲ್ಲಿ 25.66ರ ಸರಾಸರಿಯಲ್ಲಿ 141ರ ಸ್ಟ್ರೈಕ್‌ ರೇಟ್‌ ನಲ್ಲಿ 1,925 ರನ್ ಕಲೆ ಹಾಕಿದ್ದಾರೆ. ಪೊವೆಲ್ ಅವರ ಟಿ20 ದಾಖಲೆಯಲ್ಲಿ ಒಂದು ಶತಕ ಹಾಗೂ 9 ಅರ್ಧಶತಕಗಳಿವೆ. 107 ಗರಿಷ್ಠ ಸ್ಕೋರಾಗಿದೆ.

ವೆಸ್ಟ್‌ಇಂಡೀಸ್ ತಂಡವು ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕ್ರಿಸ್ ಗೇಲ್ ಅವರು 79 ಟಿ20 ಪಂದ್ಯಗಳಲ್ಲಿ 27.92ರ ಸರಾಸರಿಯಲ್ಲಿ 137.50ರ ಸ್ಟ್ರೈಕ್‌ ರೇಟ್‌ ನಲ್ಲಿ 2 ಶತಕ ಹಾಗೂ 14 ಅರ್ಧಶತಕಗಳ ಸಹಿತ 1,899 ರನ್ ಗಳಿಸಿದ್ದಾರೆ. ಗೇಲ್ ಅವರ ಗರಿಷ್ಠ ಸ್ಕೋರ್ 117.

ವೆಸ್ಟ್‌ಇಂಡೀಸ್ ಪರ ನಿಕೊಲಸ್ ಪೂರನ್ ಅವರು ಟಿ20 ಕ್ರಿಕೆಟ್‌ ನಲ್ಲಿ ಗರಿಷ್ಠ ರನ್ ಕಲೆ ಹಾಕಿದ್ದಾರೆ. ಪೂರನ್ ಅವರು 106 ಪಂದ್ಯಗಳಲ್ಲಿ 26.14ರ ಸರಾಸರಿಯಲ್ಲಿ, 136ರ ಸ್ಟ್ರೈಕ್‌ ರೇಟ್‌ ನಲ್ಲಿ 13 ಅರ್ಧಶತಕಗಳ ಸಹಿತ 2,275 ರನ್ ಗಳಿಸಿದ್ದಾರೆ. 98 ರನ್ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News