×
Ad

ನಾರ್ವೆ ಚೆಸ್ ಚಾಂಪಿಯನ್ ಪ್ರಜ್ಞಾನಂದಗೆ 50 ಲಕ್ಷ ರೂ. ಬಹುಮಾನ

Update: 2026-06-08 23:08 IST

Photo Courtesy: @CMOTamilNadu/X

ಚೆನ್ನೈ, ಜೂ.8: ನಾರ್ವೆ ಚೆಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರಿಗೆ ತಮಿಳುನಾಡು ಸರ್ಕಾರವು 50 ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿದೆ.

ಸೋಮವಾರ ಚೆನ್ನೈನ ಸಚಿವಾಲಯದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಜ್ಞಾನಂದ ಅವರಿಗೆ ಚೆಕ್ ಹಸ್ತಾಂತರಿಸಿದರು.

ಮುಖ್ಯಮಂತ್ರಿ ವಿಜಯ್ ಅವರು ಪ್ರಜ್ಞಾನಂದ ಅವರೊಂದಿಗೆ ಚೆಸ್ ಆಟವನ್ನೂ ಆಡಿ ಗಮನ ಸೆಳೆದರು.

‘‘ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಅವರು (ಮುಖ್ಯಮಂತ್ರಿ ವಿಜಯ್) ಅಧಿಕಾರಿಗಳಿಗೆ ಒಂದು ಬೋರ್ಡ್ ತರಲು ಹೇಳಿದರು ಹಾಗೂ ನನ್ನೊಂದಿಗೆ ಆಟವಾಡಲು ಆರಂಭಿಸಿದರು. ಅವರು ಚೆಸ್ ಆಡುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ನಾನು ಗೆದ್ದರೂ, ಅವರು ಚೆನ್ನಾಗಿ ಆಡಿದರು. ತಮ್ಮ ಸ್ನೇಹಿತರೊಂದಿಗೆ ಆಗಾಗ್ಗೆ ಚೆಸ್ ಆಡುತ್ತೇನೆಂದು ಅವರು ನನಗೆ ಹೇಳಿದರು’’ ಎಂದು ಪ್ರಜ್ಞಾನಂದ ಹೇಳಿದರು.

ಕಳೆದ ವಾರ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ಪ್ರಜ್ಞಾನಂದ ಅವರು ನಾರ್ವೆ ಚೆಸ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News