ಅರ್ಜೆಂಟೀನ ತಂಡಕ್ಕೆ ತಾಯ್ನಾಡಿನಲ್ಲಿ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ

Update: 2026-07-21 21:10 IST

Photo Credit : AP 

ಬ್ಯುನಸ್ ಐರಿಸ್, ಜು.21: ಸ್ಪೇನ್ ತಂಡದ ವಿರುದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿ ರನ್ನರ್ಸ್ ಅಪ್‌ಗೆ ತೃಪ್ತಿಪಟ್ಟುಕೊಂಡಿರುವ ಅರ್ಜೆಂಟೀನ ಫುಟ್ಬಾಲ್ ತಂಡವು ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅವರಿಲ್ಲದೆ ಸೋಮವಾರ ತಾಯ್ನಾಡಿಗೆ ವಾಪಸಾಗಿದೆ. ಸಾವಿರಾರು ಅಭಿಮಾನಿಗಳು ಚಳಿ ಹಾಗೂ ಮಳೆಯನ್ನು ಲೆಕ್ಕಿಸದೆ ಅರ್ಜೆಂಟೀನ ತಂಡಕ್ಕೆ ಅದ್ದೂರಿ ಸ್ವಾಗತ ನೀಡಿದರು.

ನಾಲ್ಕು ವರ್ಷಗಳ ಹಿಂದೆ 2022ರಲ್ಲಿ ಅರ್ಜೆಂಟೀನ ತಂಡವು ವಿಶ್ವಕಪ್ ಟ್ರೋಫಿಯೊಂದಿಗೆ ತವರಿಗೆ ವಾಪಸಾದಾಗ ಲಕ್ಷಾಂತರ ಜನರು ತಂಡದ ವಿಜಯವನ್ನು ಆಚರಿಸಿದ್ದರು.

ತಂಡದ ಕೆಲವು ಸದಸ್ಯರು ವಿಮಾನದಲ್ಲಿ ಇರುವುದಿಲ್ಲ ಎಂದು ಅರ್ಜೆಂಟೀನದ ಫುಟ್ಬಾಲ್ ಅಸೋಸಿಯೇಶನ್ ಈ ಹಿಂದೆಯೇ ಹೇಳಿತ್ತು. ತಂಡದ ನಾಯಕ ಮೆಸ್ಸಿ ವಿಮಾನದಿಂದ ಇಳಿಯುತ್ತಿರುವ ದೃಶ್ಯವು ಸ್ಥಳೀಯ ದೂರದರ್ಶನದಲ್ಲಿ ಪ್ರಸಾರವಾದ ಚಿತ್ರಗಳಲ್ಲಿ ಕಂಡುಬಂದಿಲ್ಲ.

ಕೋಚ್ ಲಿಯೋನೆಲ್ ಸ್ಕಾಲೋನಿ ಹಾಗೂ ತಂಡದ ಉಳಿದ ಆಟಗಾರರನ್ನು ವಿಮಾನದ ಹೊರಗೆ ರತ್ನಗಂಬಳಿ ಹಾಗೂ ಮಿಲಿಟರಿ ಬ್ಯಾಂಡ್‌ನೊಂದಿಗೆ ಸ್ವಾಗತಿಸಲಾಯಿತು. ಬಸ್ಸನ್ನು ಏರಿದ ಅರ್ಜೆಂಟೀನದ ಆಟಗಾರರು ದಾರಿಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News